ಕರ್ನಾಟಕ

karnataka

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ETV Bharat / videos

ನನಗೆ ಟಿಕೆಟ್ ಪಕ್ಕಾ, ಎರಡು ದಿನ ಕಾದು ನೋಡಿ: ಜಗದೀಶ್ ಶೆಟ್ಟರ್ - ETV Bharat kannada News

By

Published : Apr 13, 2023, 10:51 PM IST

ಹುಬ್ಬಳ್ಳಿ :ನನಗೆ ಎರಡು ದಿನಗಳಲ್ಲಿ ಟಿಕೆಟ್ ಸಿಗುತ್ತದೆ. ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ನನ್ನ ಮಗನ ಹೆಸರು ಕೂಡಾ ಹೇಳಿಲ್ಲ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜೊತೆ ಸುದೀರ್ಘ ಮೀಟಿಂಗ್ ಆಗಿದೆ. ಓಪನ್ ಆಗಿ‌ ಎಲ್ಲವನ್ನೂ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.    

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಅವರೂ ಕೂಡ ಶೆಟ್ಟರ್‌ಗೆ ಟಿಕೆಟ್ ‌ಕೊಡಬೇಕು ಎಂದು ಅಮಿತ್ ಶಾ ಹಾಗೂ ನಡ್ಡಾ ಜೊತೆ ಮಾತಾಡಿದ್ದಾರೆ. ಇದು ಕೇವಲ ಜಗದೀಶ್ ಶೆಟ್ಟರ್ ಪ್ರಶ್ನೆ ಅಲ್ಲ, ನನಗೆ ಟಿಕೆಟ್ ಸಿಗದೇ ಹೋದರೆ ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ ಎಂದರು. 

ನಿಮಗೆ ಟಿಕೆಟ್ ತಪ್ಪಿಸಲು ಸಿಎಂ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾನು ಯಾರ ಬಗ್ಗೆನೂ ಕಮೆಂಟ್‌ ಮಾಡಲ್ಲ ಎಂದು ಹೇಳಿದರು. ಬಳಿಕ ಎರಡನೇ ಪಟ್ಟಿಯಲ್ಲಿ ಹೆಸರು ಬರದೇ ಇರುವುದಕ್ಕೆ ಪ್ರತಿಕ್ರಿಯಿಸಿ, ನಿನ್ನೆ ಸಂಜೆವರೆಗೂ ಮೀಟಿಂಗ್ ಇತ್ತು. ಆದ್ದರಿಂದ ಅದು ಸಹಜ, ಅದರಲ್ಲಿ ವಿಶೇಷ ಇಲ್ಲ. ನನಗೆ ಟಿಕೆಟ್ ಸಿಗುತ್ತದೆ ನೋಡಿ ಎಂದರು.

ಇದನ್ನೂ ಓದಿ :ಬಿಜೆಪಿಯಿಂದ ಬಿ ಫಾರಂ ವಿತರಣೆ: ಚಿತ್ರದುರ್ಗದಿಂದ ಕಣದಲ್ಲಿದ್ದಾರೆ 75ರ ಜಿ.ತಿಪ್ಪಾರೆಡ್ಡಿ

ABOUT THE AUTHOR

...view details