ಕರ್ನಾಟಕ

karnataka

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಪ್ರಶ್ನೆ

ETV Bharat / videos

ಪ್ರಧಾನಿ ಏನು ಭಗವಂತನೇ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಪ್ರಶ್ನೆ - ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ

By

Published : Aug 10, 2023, 1:02 PM IST

Updated : Aug 10, 2023, 1:25 PM IST

ನವದೆಹಲಿ:ಸಂಸತ್ತಿನ 2023ರ ಮುಂಗಾರು ಅಧಿವೇಶನದಲ್ಲಿ ಎರಡು ದಿನಗಳ ಕಾಲ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಇಂದು ಚರ್ಚೆಯ ಮೂರನೇ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಭಾಗವಹಿಸಲಿದ್ದು, ಸಂಜೆ 4 ಗಂಟೆಗೆ ಉತ್ತರ ನೀಡಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮಾಹಿತಿ ನೀಡಿದ್ದಾರೆ. ಸದನವನ್ನು ಮುಂದೂಡುವ ಮುನ್ನವೇ ಕೇಂದ್ರ ಸಚಿವರು ಇದನ್ನು ಖಚಿತಪಡಿಸಿದರು. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಎರಡು ದಿನಗಳ ಹಿಂದೆ ಈ ಚರ್ಚೆಯನ್ನು ಪ್ರಾರಂಭಿಸಿದ್ದರು.

ಇಂದು ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಣಿಪುರ ಹಿಂಸಾಚಾರದ ಬಗ್ಗೆ ಉತ್ತರ ನೀಡಲು ಪಿಎಂ ಮೋದಿ ಸಂಸತ್ತಿಗೆ ಹಾಜರಾಗಲು ಸಿದ್ಧರಿಲ್ಲ. ಪ್ರಧಾನಿ ಏನು ದೇವರೇ.. ಅವರೇನು ಭಗವಂತನೇ.. ಅವರು ಬರುವುದರಿಂದ ಏನು ಆಗಲ್ಲ. ಅವರೇನು ದೇವರಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದಾದ ಬಳಿಕ ಸದನದಲ್ಲಿ ಪ್ರತಿಪಕ್ಷಗಳ ಗದ್ದಲ ಹೆಚ್ಚಾದ ಹಿನ್ನೆಲೆ ಕಲಾಪವನ್ನು ಮುಂದೂಡಲಾಯಿತು. 

ಓದಿ:ಅವಿಶ್ವಾಸ ನಿಲುವಳಿ: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಉತ್ತರ, ಮಣಿಪುರ ವಿಚಾರವಾಗಿ ವಿಪಕ್ಷಗಳ 'ಸಂಘರ್ಷ' 

Last Updated : Aug 10, 2023, 1:25 PM IST

ABOUT THE AUTHOR

...view details