ಶಾಲೆಯೊಂದಕ್ಕೆ ನುಗ್ಗಿದ ವನ್ಯಜೀವಿ.. ಗಾಯಾಗೊಂಡಿದ್ದ ಗುರಾಲ್ ಸೆರೆ
ಡೆಹರಾಡೂನ್: ಉತ್ತರಕಾಶಿಯ ಮುಖೇಂ ವ್ಯಾಪ್ತಿಯ ಸರಸ್ವತಿ ವಿದ್ಯಾ ಮಂದಿರ ಶಾಲೆಗೆ ಇಂದು ಬೆಳಗ್ಗೆ ಗಾಯಾಗೊಂಡಿದ್ದ ಗುರಾಲ್(ವನ್ಯಜೀವಿ) ಏಕಾಏಕಿ ಪ್ರವೇಶಿಸಿದೆ. ಈ ವೇಳೆ ಶಾಲೆಯ ಸಿಬ್ಬಂದಿ ಗುರಾಲ್ ಕಂಡು ತರಗತಿ ಕೊಠಡಿಯೊಳಗೆ ಬೀಗ ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಗೊಂಡಿದ್ದ ಗುರಾಲ್ ಸೆರೆ ಹಿಡಿದು ಬೋನಿನಲ್ಲಿ ಬಂಧಿಸಿದ್ದು, ಅಲ್ಲೇ ನೆರೆದಿದ್ದ ಮಕ್ಕಳ ಗುಂಪು ಗುರಾಲ್ ನೋಡಲು ಮುಗಿಬಿದ್ದರು. ಬಳಿಕ ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಪರೀತ ಚಳಿಯಿಂದಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳತ್ತ ಸಾಗುತ್ತಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Last Updated : Feb 3, 2023, 8:37 PM IST