ಕರ್ನಾಟಕ

karnataka

ಅಕ್ರಮವಾಗಿ ನಿಷೇಧಿತ ಕೀಟನಾಶಕ ಮಾರಾಟ

ETV Bharat / videos

ತುಮಕೂರು: ನಿಷೇಧಿತ ಕೀಟನಾಶಕ ಮಾರಾಟ ಪತ್ತೆ, 2204 ಕೆ.ಜಿ ರಸಗೊಬ್ಬರ ಜಪ್ತಿ

By

Published : Feb 9, 2023, 4:28 PM IST

Updated : Feb 14, 2023, 11:34 AM IST

ತುಮಕೂರು:ಪಾವಗಡ ಪಟ್ಟಣದಲ್ಲಿನಿಷೇಧಿತ ಕೀಟನಾಶಕಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರಸಗೊಬ್ಬರ ಮಾರಾಟ ಮಳಿಗೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಳಿಗೆಯಲ್ಲಿದ್ದ ನಿಷೇಧಿತ ಬ್ರೋನೋಪೋಲ್, ಬ್ರೋರಾನ್2, ನೈಟ್ರೋಪೇನ್ 1 ಮತ್ತು 2204 ಕೆಜಿ ರಸಗೊಬ್ಬರನ್ನು ಜಪ್ತಿ ಮಾಡಿದ್ದಾರೆ. ಸುಮಾರು 1,56,500 ರೂಪಾಯಿ ಮೌಲ್ಯದ ರಸಗೊಬ್ಬರವನ್ನು ಅನುಮತಿ ಇಲ್ಲದೇ ಮಾಲೀಕ ಮಾರಾಟ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.  

ಮಳಿಗೆ ಮಾಲೀಕನ ವಿರುದ್ಧ ಕೀಟನಾಶಕ ಕಾಯ್ದೆ 1968 ಅಡಿ ನೋಟಿಸ್ ನೀಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದರು. ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಅಪಾಯಕಾರಿ ಔಷಧ ಸಿಂಪಡಿಸಿ ನಾಲ್ಕು ಎಕರೆ ದ್ರಾಕ್ಷಿ ಬೆಳೆ ಕಮರಿ ಹೋಗಿತ್ತು. ರೈತರಿಗೆ ಅಪಾಯಕಾರಿಯಾದ ಹಾಗೂ ಬೆಳೆ ನಾಶವಾಗುವಂತಹ ಕೀಟನಾಶಕಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಇದನ್ನೂ ಓದಿ:ಮಾದಕ ವಸ್ತು ಮಾರಾಟ: ಚಿಕ್ಕಮಗಳೂರಲ್ಲಿ ಆರೋಪಿ ಬಂಧನ

Last Updated : Feb 14, 2023, 11:34 AM IST

ABOUT THE AUTHOR

...view details