ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಬೃಹತ್ ಗಾತ್ರದ ಚಿಮಣಿ ನೆಲಸಮ: ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ಜನ - etv bharath kannada news

By

Published : Jan 25, 2023, 5:25 PM IST

Updated : Feb 3, 2023, 8:39 PM IST

ಹುಬ್ಬಳ್ಳಿ : ವಾಣಿಜ್ಯನಗರಿಯ ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿರುವ ಪುರಾತನ ಜವಳಿ ಮಿಲ್​ನ ಚಿಮಣಿ ನೆಲಸಮ ಮಾಡಲಾಗಿದ್ದು, ಈ ದೃಶ್ಯ ವೈರಲ್​ ಆಗಿದೆ. ಜವಳಿ‌ ಮಿಲ್​ನ ಚಿಮಣಿ ಬಹಳ ಹಳೆಯದಾಗಿದ್ದು, ಇದಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ ಇತ್ತೀಚೆಗೆ ಈ ಜಾಗದ ಮಾಲೀಕರು ಬೇರೆಯವರಿಗೆ ಪರಭಾರೆ ಮಾಡಿದ್ದು, ಈ ಜಾಗ ಖರೀದಿಸಿದವರು ಈ ಬೃಹತ್ ಗಾತ್ರದ ಹಾಗೂ ಅತ್ಯಂತ ಹಳೆಯ ಚಿಮಣಿಯನ್ನು ನೆಲಸಮ‌ ಮಾಡಿದರು. 

ಕಳೆದ ಕೆಲ ವರ್ಷಗಳ ಹಿಂದೆ ಜವಳಿ ಕಟ್ಟಡ ನೆಲಸಮ ಮಾಡಿ, ಚಿಮಣಿಯನ್ನು ಹಾಗೇ ಬಿಡಲಾಗಿತ್ತು. ಮಂಗಳವಾರ ರಾತ್ರಿ ಈ ಎತ್ತರದ ಚಿಮಣಿಯನ್ನು ನೆಲಸಮ ಮಾಡಿದ್ದಾರೆ.‌ ಚಿಮಣಿ ನೆಲಸಮವಾಗುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗಿದೆ.

ಓದಿ :  ಬೈಕ್ ಸ್ಟಂಟ್ ಮಾಡಲು ಹೋಗಿ ಹಾರಿ ಬಿದ್ದ ಸವಾರರು.. ವಿಡಿಯೋ ವೈರಲ್ 

Last Updated : Feb 3, 2023, 8:39 PM IST

ABOUT THE AUTHOR

...view details