ಬಾಲಸೋರ್ ಭೀಕರ ರೈಲು ದುರಂತದ ಭಯಾನಕ ದೃಶ್ಯ : ಹಳಿ ಮೇಲೆ ಶವಗಳ ಸಾಲು! - Etv Bharat Kannada
ಭುವನೇಶ್ವರ್ (ಒಡಿಶಾ):ಇಲ್ಲಿಯ ಬಾಲಸೋರ್ನಲ್ಲಿ ನ್ನಿನೆ ಸಂಜೆ ವೇಳೆ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಈ ವರೆಗೂ 238 ಜನ ಪ್ರಾಣತೆತ್ತಿದ್ದು, 900 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಬಿಎಸ್‌ಕೆವೈ ಆಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಒದಗಿಸುವಂತೆ ಸಿಎಂ ಆದೇಶಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ರಾಜ್ಯವು ಭರಿಸಲಿದೆ ಎಂದೂ ಕೂಡ ಹೇಳಿದ್ದಾರೆ.
ಇನ್ನು ಘಟನಾಸ್ಥಳದಲ್ಲಿನ ಪ್ರಸ್ತುತದ ದೃಶ್ಯಗಳು ಸೆರೆಯಾಗಿದ್ದು, ಅಪಘಾತದ ತೀವ್ರತೆ ಎಷ್ಟು ಗಂಭೀರವಾಗಿದೆ ಎಂಬುದ ದೃಶ್ಯಗಳಿಂದ ತಿಳಿಯಬಹುದಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಎನ್ಡಿಆರ್ಎಫ್, ಒಡಿಆರ್ಎಫ್, ಅಗ್ನಿಶಾಮಕ ದಳ ರಕ್ಷಣಾ ಕಾರ್ಯಚರಣೆ ಕೈಗೊಂಡಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳದಲ್ಲಿ ಹಾಜರಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈಗಾಗಲೆ ರೈಲ್ವೆ ಇಲಾಖೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ, ಗಾಯಾಳುಗಳಿಗೆ ತಲಾ 2 ಲಕ್ಷ, ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಘೋಷಣೆ ಮಾಡಿದೆ. ಘಟನೆಗೆ ಪ್ರಧಾನಿ ಕಳವಳ ವ್ಯಕ್ತ ಪಡಿಸಿದ್ದ ಧನ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಘನಘೋರ ರೈಲು ದುರಂತ: ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯ, ಉನ್ನತ ಮಟ್ಟದ ತನಿಖೆಗೆ ಆದೇಶ