ಕರ್ನಾಟಕ

karnataka

ಪೊಲೀಸರು ತಮ್ಮ ಕೆಲಸ ನಿಭಾಯಿಸದಿದ್ದಲ್ಲಿ ನಮ್ಮ ಫಾರ್ಮಸಿಯಲ್ಲಿ ಬೇರೆ ಬೇರೆ ಔಷಧಗಳಿವೆ : ಗೃಹಸಚಿವ ಪರಮೇಶ್ವರ್

ETV Bharat / videos

'ಪೊಲೀಸರು ತಮ್ಮ ಕೆಲಸ ನಿಭಾಯಿಸದಿದ್ದಲ್ಲಿ ನಮ್ಮ ಫಾರ್ಮಸಿಯಲ್ಲಿ ಬೇರೆ ಬೇರೆ ಔಷಧಗಳಿವೆ' - ಈಟಿವಿ ಭಾರತ ಕನ್ನಡ

By

Published : Jun 6, 2023, 8:35 PM IST

Updated : Jun 6, 2023, 9:12 PM IST

ಮಂಗಳೂರು: ಪೊಲೀಸ್ ಇಲಾಖೆ ಕಳೆದ 4 ವರ್ಷಗಳಿಂದ ಹೇಗಿತ್ತೋ ನನಗೆ ಗೊತ್ತಿಲ್ಲ. ಅವರು ಕೇಸರೀಕರಣ ಮಾಡಿದ್ದಾರೋ ಅದು ನನಗೆ ಅಗತ್ಯವಿಲ್ಲ. ಆದರೆ, ಮುಂದೆ ಸರಿಯಾಗಿರಬೇಕೆಂದು ಪೊಲೀಸ್ ಇಲಾಖೆಗೆ ಖಡಕ್ ಸೂಚನೆಗಳನ್ನು ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಗೃಹ ಸಚಿವರಾದ ಬಳಿಕ ಮಂಗಳೂರಿಗೆ ಪ್ರಥಮ ಭೇಟಿ ನೀಡಿದ ಅವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಅಭಿನಂದನೆ ಕಾರ್ಯಕ್ರಮ ನಡೆಯಿತು. ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್‌ಗಿರಿ ನಡೆಯದಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದೇನೆ. ಈ ಸಂಬಂಧ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದೇನೆ. ನೈತಿಕ ಪೊಲೀಸ್ ಗಿರಿಯನ್ನು ನಿಯಂತ್ರಣ ಮಾಡುವುದು ಹಾಗೂ ತಡೆಯುವುದಷ್ಟೇ ಅವರ ಕೆಲಸ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದೇನೆ. ಇವತ್ತಿನಿಂದಲೇ ಇದು ಜಾರಿಗೆ ಬರಲಿದೆ ಎಂದರು.

ಪೊಲೀಸ್‌ ಇಲಾಖೆ ಕಳೆದ ನಾಲ್ಕು ವರ್ಷ ಏನು ಮಾಡಿದೆ ಅನ್ನೋದು ನನಗೆ ಬೇಡ. ಆದರೆ, ಮುಂದಿನ ದಿನಗಳಲ್ಲಿ ಸರಿಯಾಗಿರುವಂತೆ ಸೂಚನೆ ನೀಡಿದ್ದೇನೆ. ನಿಯಮ ಪಾಲನೆ ಮಾಡದೇ ಹೋದಲ್ಲಿ ನಮ್ಮ ಫಾರ್ಮಸಿಯಲ್ಲಿ ಬೇರೆ ಬೇರೆ ಔಷಧಗಳಿವೆ, ಮಾಡಿಸುತ್ತೇವೆ ಎಂದರು. 

ದಕ್ಷಿಣ ಕನ್ನಡ ಜಿಲ್ಲೆ ಸಾಮರಸ್ಯ, ಶಾಂತಿಯುಳ್ಳ ಜಿಲ್ಲೆ. ಆದರೆ ಇತ್ತೀಚೆಗೆ ಕೋಮುಸೂಕ್ಷ್ಮ ಘಟನೆಗಳು ಪದೇ ಪದೇ ನಡೆದು ಜನರು ಭೀತಿಯಿಂದ ಜೀವನ ನಡೆಸುವ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಅತಿ ದೊಡ್ಡ ನಗರವೆನಿಸುವ ಎಲ್ಲ ಲಕ್ಷಣಗಳು ಮಂಗಳೂರಿಗೆ ಇದೆ. ಭವಿಷ್ಯದಲ್ಲಿ ಈ ನಗರ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಅವಕಾಶಗಳಿದೆ. ನಾಗರಿಕರು ಅದಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ :ಮಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್‌ ವಿಂಗ್ : ಗೃಹ ಸಚಿವ ಪರಮೇಶ್ವರ್ ಘೋಷಣೆ

Last Updated : Jun 6, 2023, 9:12 PM IST

ABOUT THE AUTHOR

...view details