ಹಿಮದಿಂದ ಹೊಳೆಯುತ್ತಿರುವ ಪರ್ವತ ಶ್ರೇಣಿಗಳು: ಗಂಗೋತ್ರಿಯಲ್ಲಿ ಹಿಮಪಾತದ ಅದ್ಭುತ ದೃಶ್ಯ ನೋಡಿ
ಉತ್ತರಾಖಂಡ: ಉತ್ತರಕಾಶಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಉತ್ತರಾಖಂಡದಲ್ಲಿ ಮಳೆ ಮತ್ತು ಹಿಮಪಾತ ಮುಂದುವರಿದಿದೆ. ತೀರ್ಥಕ್ಷೇತ್ರ ಗಂಗೋತ್ರಿಯಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಜನರು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಹಿಮಪಾತದಿಂದಾಗಿ ಪರ್ವತ ಶ್ರೇಣಿಗಳು ಬೆಳ್ಳಿಯಂತೆ ಹೊಳೆಯುತ್ತಿವೆ. ಗಂಗೋತ್ರಿ, ಯಮುನೋತ್ರಿ, ಹರ್ಷಿಲ್, ದಯಾರಾ ಬುಗ್ಯಾಲ್, ರಾಡಿ ಟಾಪ್, ಹರ್ಕಿಡೂನ್, ಕೇದಾರಕಂಠ ಸೇರಿದಂತೆ ಇತರ ಎತ್ತರದ ಸ್ಥಳಗಳಲ್ಲಿ ಹಿಮಪಾತವಾಗುತ್ತಿದ್ದರೆ, ತಗ್ಗು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಪರಿಣಾಮ ಚಳಿಯ ಅಬ್ಬರ ಹೆಚ್ಚಾಗಿದೆ.
ಉತ್ತರಕಾಶಿಯಲ್ಲಿ ಗರಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹೆಚ್ಚುತ್ತಿರುವ ಚಳಿಯಿಂದಾಗಿ ಸ್ಥಳೀಯರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಎತ್ತರವಿರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಕಣಿವೆ ನಾಡಿಗೆ ಹಿಮದ ಹೊದಿಕೆ: ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್- ವಿಡಿಯೋ