ಪ್ರಾರ್ಥನೆ ಮುಗಿದ ಕೆಲವೇ ನಿಮಿಷದಲ್ಲಿ ಧರೆಗುರುಳಿದ ಬೃಹತ್ ಆಲದ ಮರ! ತಪ್ಪಿದ ಅನಾಹುತ
ವಿಜಯನಗರ: ಹೊಸಪೇಟೆಯ ಈದ್ಗಾ ಮೈದಾನದಲ್ಲಿದ್ದ ಬೃಹದಾಕಾರದ ಆಲದ ಮರವೊಂದು ಇದ್ದಕ್ಕಿದ್ದಂತೆ ನೆಲಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಮರ ಧರೆಗುರುಳಿದ ವೇಳೆ ಯಾರೂ ಇರಲಿಲ್ಲ. ಹಾಗಾಗಿ ದೊಡ್ಡ ಅನಾಹುತ ತಪ್ಪಿಂತಾಗಿದೆ. ಇಂದು ರಂಜಾನ್ ಹಬ್ಬವಾಗಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಮುಸ್ಲಿಂ ಬಾಂಧವರು ಇದೇ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸೇರಿದ್ದರು. ಪ್ರಾರ್ಥನೆ ಮುಗಿದು ಮೈದಾನದಿಂದ ಹೊರಗೆ ಹೋದ ಕೆಲವೇ ನಿಮಿಷದಲ್ಲಿ ಈ ಬೃಹತ್ ಆಲದ ಮರ ಧರೆಗುರುಳಿದೆ. ಈ ವೇಳೆ, ಬೆರಳೆಣಿಕೆ ಜನರು ಮಾತ್ರ ಇದ್ದಿದ್ದರಿಂದ ನೂರಾರು ಜನರ ಪ್ರಾಣ ಉಳಿದಂತಾಗಿದೆ. 'ಪ್ರತಿ ವರ್ಷದಂತೆ ಈ ವರ್ಷ ಕೂಡ ಮುಸ್ಲಿಂ ಬಾಂಧವರೆಲ್ಲ ಸೇರಿಕೊಂಡು ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆ ಮುಗಿದ ಕೆಲವೇ ನಿಮಿಷದ ಬಳಿಕ ಏಕಾಏಕಿ ಮರ ಬಿದ್ದಿದ್ದು ಅಚ್ಚರಿ ತರಿಸಿದೆ. ಮರ ಬೀಳುವಾಗ ಅದೃಷ್ಟವಶಾತ್ ಆ ಕ್ಷಣಕ್ಕೆ ಯಾರೂ ಇರಲಿಲ್ಲ. ಭಗವಂತನ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ' ಎಂದು ಅಂಜುಮನ್ ಕಮಿಟಿಯ ಅಧ್ಯಕ್ಷ ಇಮಾಮ್ ನಿಯಾಜಿ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ:ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್