ಪ್ರೇಮಿಗಳ ದಿನದಂದು ಪ್ರಧಾನಿ ಮೋದಿಗಾಗಿ ಸಿದ್ದವಾಯಿತು ₹2.50 ಲಕ್ಷದ ಚಿನ್ನದ ಗುಲಾಬಿ ಹೂಗಳ ಉಡುಗೊರೆ! - Etv Bharat Kannada
ಸೂರತ್ (ಗುಜರಾತ್): ಪ್ರತಿ ವರ್ಷ ಫೆ.14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೇ ಈ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ವಿವಿಧ ಬಗೆಯ ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಸೂರತ್ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಈ ಬಾರಿಯ ಪ್ರೇಮಿಗಳು ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಸಿದ್ದರಾಗಿದ್ದು, ಈ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲೆಂದು ವಿಶೇಷವಾದ ಉಡುಗೊರೆಯೊಂದನ್ನ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
ಹೌದು 24 ಕ್ಯಾರೆಟ್ನ ಚಿನ್ನ ಲೇಪಿತ ಗುಲಾಬಿ ಹೂಗುಚ್ಚವನ್ನು ತಯಾರಿಸಿರುವ ವಿದ್ಯಾರ್ಥಿಗಳು ಅದನ್ನು ನಾಳೆ ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ. ಸುಮಾರು 151 ಚಿನ್ನ ಲೇಪಿತ ಗುಲಾಬಿ ಇರುವ ಈ ಹೂಗುಚ್ಚವನ್ನು ತಯಾರಿಸಲು 2.50 ಲಕ್ಷ ರೂ ತಗುಲಿದ್ದು, ತಮ್ಮ ಪಾಕೆಟ್ ಮನಿಯಿಂದಲೇ ಈ ಉಡುಗೊರೆಯನ್ನು ತಯಾರಿಸಿರುವುದಾಗಿ ವಿದ್ಯಾರ್ಥಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೇ ಈ ದಿನದಂದು ತಮ್ಮ ನೆಚ್ಚನಿ ವ್ಯಕ್ತಿಗಳಿಗೆ ಗುಲಾಬಿ ಹೂಗಳನ್ನು ಕೊಡುವ ಪದ್ದತಿ ಇದ್ದ ಕಾರಣ ಇದನ್ನು ಮೋದಿ ಅವರಿಗೆ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.