ಕರ್ನಾಟಕ

karnataka

ಟ್ಯಾಂಕ್​​​ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವು-

ETV Bharat / videos

ಟ್ಯಾಂಕ್​​​ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ವರು ಕಾರ್ಮಿಕರ ಸಾವು - ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವು

By ETV Bharat Karnataka Team

Published : Nov 14, 2023, 11:01 PM IST

ಸೂರತ್(ಗುಜರಾತ್​):ಟ್ಯಾಂಕ್​​​ ಸ್ವಚ್ಛಗೊಳಿಸಲು ಒಳಗೆ ಇಳಿದಿದ್ದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಕಿರಣ್ ಇಂಡಸ್ಟ್ರೀಸ್ ಎಂಬ ಮಿಲ್‌ನಲ್ಲಿ ನಡೆದಿದೆ. ಸೂರತ್ ಜಿಲ್ಲೆಯ ಪಲ್ಸಾನ - ಕಡೋದರ ರಸ್ತೆಯ ಬಲೇಶ್ವರ ಗ್ರಾಮದ ಹೊರವಲಯದಲ್ಲಿರುವ ಕಿರಣ್ ಇಂಡಸ್ಟ್ರೀಸ್ ಎಂಬ ಮಿಲ್‌ನಲ್ಲಿ ನಾಲ್ವರು ಕಾರ್ಮಿಕರು ಸ್ವಚ್ಛಗೊಳಿಸಲೆಂದು ಟ್ಯಾಂಕ್​ನ ಒಳಗೆ ಇಳಿದಿದ್ದರು. ಆದರೆ, ಟ್ಯಾಂಕ್​ನ ಒಳಗೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಡಲಾರದೇ ಪ್ರಜ್ಞಾಹೀನರಾಗಿ ಉಸಿರು ಚೆಲ್ಲಿದ್ದಾರೆ.  

ಘಟನಯ ಮಾಹಿತಿ ಪಡೆದ ಬಾರ್ಡೋಲಿ ಅಗ್ನಿಶಾಮಕ ದಳ ಮತ್ತು ಕಾಮ್ರೇಜ್ ಇಆರ್‌ಸಿ ಅಗ್ನಿಶಾಮಕ ದಳದ ತಂಡವು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಅವರ ರಕ್ಷಣೆಗೆ ಮುಂದಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರು ಇಳಿದಿದ್ದ ಆಳವಾದ ಟ್ಯಾಂಕ್​ಗೆ ಇಳಿದು ಕಾರ್ಮಿಕರಿಗಾಗಿ ಶೋಧ ನಡೆಸಿದ್ದಾರೆ. ಟ್ಯಾಂಕ್​ ಒಳಗೆ 4 ಜನ ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಹರಸಾಹಸ ಪಟ್ಟು ನಾಲ್ವರನ್ನು ಮೇಲಕ್ಕೆತ್ತಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಉಸಿರಾಡಲು ಗಾಳಿಯ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸಂಬಂಧ ಸೂರತ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಬಿ.ಗಧ್ವಿ ಮಾತನಾಡಿದ್ದು, ನಮಗೆ ಘಟನೆ ಕುರಿತು ಕರೆ ಬಂದ ತಕ್ಷಣ ನಮ್ಮ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಎಲ್ಲ ನಾಲ್ವರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ದುರದೃಷ್ಟವಶಾತ್ ಎಲ್ಲಾ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ದಟ್ಟ ಮಂಜಿನಿಂದ ಪಂಜಾಬ್​ನಲ್ಲಿ ಸರಣಿ ಅಪಘಾತ: 100 ವಾಹನಗಳು ಜಖಂ, ಓರ್ವ ಸಾವು- ವಿಡಿಯೋ

ABOUT THE AUTHOR

...view details