ಕರ್ನಾಟಕ

karnataka

ETV Bharat / videos

ವೃದ್ಧೆಯ ಅಂತ್ಯಕ್ರಿಯೆ ವೇಳೆ ಪಟಾಕಿ ಕಿಡಿಯಿಂದ ಅವಘಡ: 6 ಬೈಕ್, ಗುಡಿಸಲು ಸುಟ್ಟು ಭಸ್ಮ - ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ

By

Published : Dec 27, 2022, 6:19 AM IST

Updated : Feb 3, 2023, 8:37 PM IST

ವಿಜಯಪುರ: ವಯೋಸಹಜ ಕಾಯಿಲೆಯಿಂದ ಮೃತ ಪಟ್ಡಿದ್ದ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರದ ವೇಳೆ ಸಿಡಿಸಿದ ಪಟಾಕಿಯ ಕಿಡಿ ಹಾರಿ ಗುಡಿಸಿಲಿಗೆ ತಗುಲಿ ಗುಡಿಸಲು ಸೇರಿ ಆರು ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದೆ. ಕಳೆದ ರಾತ್ರಿ ತಡವಲಗಾ ಗ್ರಾಮದ ವೃದ್ಧೆ ಸುಮಿತ್ರಾಬಾಯಿ ಪಾಟೀಲ್​ ಎಂಬವರು ಮೃತಪಟ್ಟಿದ್ದರು. ಸೋಮವಾರ ಸಂಜೆ ಜಯಗೌಡ ಪಾಟೀಲ್​ ಎಂಬುವರ ತೋಟದ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೇರವೇರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Last Updated : Feb 3, 2023, 8:37 PM IST

ABOUT THE AUTHOR

...view details