ಮಂಡ್ಯ: 109 ದಿನಗಳ ಸುದೀರ್ಘ ಹೋರಾಟ ಕೈಬಿಟ್ಟ ರೈತರು
ಮಂಡ್ಯ: ಕಬ್ಬು, ರಾಗಿ, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಪ್ರತಿ ಲೀಟರ್ ಹಾಲಿಗೆ 40 ನಿಗದಿಪಡಿಸುವಂತೆ ಆಗ್ರಹಿಸಿ ಕಳೆದ 109 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಇದರ ಜೊತೆಗೆ 6 ದಿನಗಳ ಕೆಲ ಅಮರಣಾಂತ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. ಆದರೆ ಹೋರಾಟಕ್ಕೆ ಜಯ ಸಿಗದ ಕಾರಣ ಇಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ, ಹೋರಾಟಕ್ಕೆ ನ್ಯಾಯ ದೊರಕುತ್ತಿಲ್ಲ ಎಂದು ಹೋರಾಟ ಕೈಬಿಟ್ಟಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಜನ ಮೋದಿ ಜೊತೆಗಿದ್ದಾರೆ, 150 ಸೀಟು ಗೆದ್ದೇ ಗೆಲ್ತೇವೆ: ಧರ್ಮೇಂದ್ರ ಪ್ರಧಾನ್