ETV Bharat Karnataka

ಕರ್ನಾಟಕ

karnataka

video thumbnail
ಶಾಮಿಲ್​ನಲ್ಲಿ ಜೋಡಿ ಕೊಲೆ

ETV Bharat / videos

ಹುಣಸೂರಿನ ಶಾಮಿಲ್​ನಲ್ಲಿ ಜೋಡಿ ಕೊಲೆ ಪ್ರಕರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - Etv bharat kannada

author img

By

Published : Jun 23, 2023, 1:37 PM IST

ಮೈಸೂರು: ನಿನ್ನೆ ಹುಣಸೂರಿನ ಶಾಮಿಲ್​ನಲ್ಲಿ ನಡೆದ ಜೋಡಿ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಜೋಡಿ ಕೊಲೆ ಚಿಲ್ಲರೆ ಕಾಸಿಗಾಗಿ  ನಡೆದಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಪರಸಯ್ಯನ ಛತ್ರದ ಬಳಿಯ ಬಡಾವಣೆಯಲ್ಲಿ ಇರುವ ಎಸ್​ಎನ್ ಶಾಮಿಲ್​ನಲ್ಲಿ, ನಿನ್ನೆ ವೆಂಕಟೇಶ್ (75) ಹಾಗೂ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಂತೆ ಇದ್ದ ಷಣ್ಮುಖ (65) ಎಂಬುವನನ್ನು, ಸೈಕೋ ವ್ಯಕ್ತಿಯೊಬ್ಬ ಚಿಲ್ಲರೆ ಹಣಕಾಸಿಗಾಗಿ ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. 

ಈ ಬಗ್ಗೆ ಅಡಿಷನಲ್ ಎಸ್ಪಿ ನಂದಿನಿ, ಬಂಧಿತ ವ್ಯಕ್ತಿ ಮಾದಕವಸ್ತುಗಳ ವ್ಯಸನಿಯಾಗಿದ್ದು, ಈತ ಈ ಹಿಂದೆ ಕಳ್ಳತನ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರತಿದಿನ ಶಾಮಿಲ್​ಗೆ ಬಂದು ಹಣ ಕೊಡುವಂತೆ ತೊಂದರೆ ಕೊಡುತ್ತಿದ್ದ. ಈತ ಚಿಲ್ಲರೆ ಕಾಸಿಗಾಗಿ ಈ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಶಾಮಿಲ್​ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಇಬ್ಬರನ್ನೂ ಕೊಲೆ ಮಾಡಿರುವ ದೃಶ್ಯ ಸೆರೆಯಾಗಿದೆ. ಈ ಆಧಾರದ ಮೇಲೆ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಇದನ್ನೂ ಓದಿ:ಗಾಂಜಾ, ಮದ್ಯಸೇವನೆ ಚಟ.. 8 ಜನರನ್ನು ಹತ್ಯೆ ಮಾಡಿದ್ದ ಸೈಕೋ ಕಿಲ್ಲರ್​ ಬಂಧನ : ನಿಟ್ಟುಸಿರು ಬಿಟ್ಟ ಜನ

ABOUT THE AUTHOR

author-img

...view details