ಧೋನಿ ಫಾರ್ಮ್ ಹೌಸ್ ಹೊರಗೆ ಅಭಿಮಾನಿಗಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ - ಈಟಿವಿ ಭಾರತ್ ಕನ್ನಡ ನ್ಯೂಸ್
ರಾಂಚಿ (ಜಾರ್ಖಂಡ್) :ಇಂದು ವಿಶ್ವ ಕ್ರಿಕೆಟ್ ಕಂಡ ಗ್ರೇಟ್ ಫಿನಿಶರ್, ಕ್ಯಾಪ್ಟನ್ ಕೂಲ್, ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ 42ನೇ ಹುಟ್ಟುಹಬ್ಬ. ಧೋನಿ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಸೇರಿದಂತೆ ಆನೇಕ ಗಣ್ಯರು ಶುಭಕೋರಿದ್ದಾರೆ. ಈ ಬೆನ್ನಲೇ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಂಚಿಯಲ್ಲಿರುವ ಧೋನಿಯ ಸಿಮ್ಲಿಯಾ ಸ್ಥಿಲ್ ಫಾರ್ಮ್ ಹೌಸ್ ಮುಖ್ಯ ಗೇಟ್ ಬಳಿ ಆಗಮಿಸಿ ಧೋನಿ ಹುಟ್ಟುಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ಆಚರಿಸಿ ಖುಷಿ ಪಟ್ಟರು.
ಧೋನಿ ಕಟೌಟ್ವೊಂದನ್ನು ತಂದು ಅದರ ಮುಂದೆ ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ದಿಗ್ಗಜ ಕ್ರಿಕೆಟಿಗನಿಗೆ ಶುಭಾಶಯ ತಿಳಿಸಿದ್ದಾರೆ. ಧೋನಿ ಹುಟ್ಟುಹಬ್ಬ ದಂದು ಎಲ್ಲರೂ ಧೋನಿಯ ದರ್ಶನ ಪಡೆಯಲು ಕಾತರರಾಗಿದ್ದರು. ಕೆಲವರು ಅವರ ಪೇಂಟಿಂಗ್ ಮಾಡಿದ್ದರೆ, ಕೆಲವರು ಕೈಯಲ್ಲಿ ಕೇಕ್ ತಂದಿದ್ದರು. ಹೇಗಾದರೂ ಧೋನಿಯನ್ನು ನೋಡಬೇಕು ಎಂಬ ಒಂದೇ ಒಂದು ಆಸೆ ಅಭಿಮಾನಿಗಳಿಗೆ ಇತ್ತು.
ಇದನ್ನೂ ಓದಿ :10ನೇ ತರಗತಿ 66%, 12ರಲ್ಲಿ 56%: 3 ICC ಟ್ರೋಫಿ ಗೆದ್ದ ಏಕೈಕ ನಾಯಕ! ಕ್ರಿಕೆಟ್ ಲೋಕದ ಕಣ್ಮಣಿ ಧೋನಿಗೆ 42ನೇ ಹುಟ್ಟುಹಬ್ಬ!