ಕರ್ನಾಟಕ

karnataka

ಟೊಮೆಟೊಗೆ ಬೆಲೆ ಏರಿಕೆಯಾದ್ರೂ, ಧಾರವಾಡ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ

ETV Bharat / videos

ಟೊಮೆಟೊ ಬೆಳೆಗೆ ಬಂದೆರಗಿದ ರೋಗ.. ಭಾರಿ ಆದಾಯ ನಿರೀಕ್ಷೆಯಲ್ಲಿದ್ದ ಧಾರವಾಡ ರೈತನಿಗೆ ಆಘಾತ! - ರೈತ ಬೆಳೆದ ಟೊಮೆಟೊಗೆ ಬೆಂಕಿ ರೋಗ

By

Published : Jul 6, 2023, 1:12 PM IST

Updated : Jul 6, 2023, 1:21 PM IST

ಧಾರವಾಡ: ಮುಂಗಾರು ಮಳೆ ವಿಳಂಬವಾದ ಹಿನ್ನೆಲೆ ಟೊಮೆಟೊಗೆ ದಾಖಲೆಯ ಬೆಲೆ ಬಂದಿದೆ. ಇದರಿಂದ ರೈತರು ಖುಷಿಯಾಗಿದ್ದಾರೆ. ಮತ್ತೊಂದೆಡೆ ಕೊಂಡುಕೊಳ್ಳುವವರು ಹಿಡಿಶಾಪ ಹಾಕುತ್ತಿದ್ದಾರೆ. ಈ ಮಧ್ಯೆ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ರೈತನಿಗೆ ಭಾರಿ ಆಘಾತ ಉಂಟಾಗಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪ್ರಕಾಶ ಸುಣಗಾರ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ಟೊಮೆಟೊ ಬೆಳೆದಿದ್ದರೂ ಸಹ ರೋಗಬಾಧೆ ಅವರ ಕನಸನ್ನು ನುಚ್ಚು ನೂರು ಮಾಡಿದೆ.

ಹೌದು, ರೈತ ಬೆಳೆದ ಟೊಮೆಟೊಗೆ ಬೆಂಕಿ ರೋಗ ತಗುಲಿದೆ. ಈ ಹಿನ್ನೆಲೆ ಬೆಳೆ ನಾಶವಾಗುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ 150-200 ರೂ.ವರೆಗಿದೆ. ಇಷ್ಟೆಲ್ಲಾ ಬೆಲೆ ಇದ್ದರೂ, ಪ್ರಕಾಶ ಸುಣಗಾರ ಅವರಿಗೆ ಒಂದೇ ವಾರದಲ್ಲಿ 2 ರಿಂದ 3 ಲಕ್ಷ ರೂಪಾಯಿನಷ್ಟು ನಷ್ಟ ಉಂಟಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗೆ ಆದಾಯ ಸಿಗದೇ ರೈತ ಕಂಗಾಲಾಗಿದ್ದಾರೆ. 

ಇದನ್ನೂ ಓದಿ:ಹಾಸನ: ರಾತ್ರೋರಾತ್ರಿ ಜಮೀನಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ

Last Updated : Jul 6, 2023, 1:21 PM IST

ABOUT THE AUTHOR

...view details