ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ದೇವಿಗೆ ಚಿನ್ನದ ಸೀರೆ ಅರ್ಪಿಸಿದ ಭಕ್ತರು: ವಿಡಿಯೋ - ಪದ್ಮಾವತಿ ದೇವಿ
Published : Dec 3, 2023, 6:54 AM IST
ಶಿವಮೊಗ್ಗ: ಜೈನ ಧರ್ಮೀಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣ ಸಮೀಪದ ಶ್ರೀ ಕ್ಷೇತ್ರ ಹೊಂಬುಜ ಅಥವಾ ಹುಂಚದ ಪದ್ಮಾವತಿ ದೇವಿಗೆ ಭಕ್ತರು ಚಿನ್ನದ ಸೀರೆಯನ್ನು ಅರ್ಪಿಸಿದ್ದಾರೆ. ಹೊಂಬುಜಕ್ಕೆ ದೇಶದ ಎಲ್ಲಾ ಭಾಗಗಳಿಂದ ಆಗಮಿಸುವ ಭಕ್ತರು ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ.
ಶನಿವಾರ ಪದ್ಮಾವತಿ ದೇವಿಗೆ ಚಿನ್ನದ ಸೀರೆ ಅರ್ಪಿಸಿದ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಕ್ಷೇತ್ರದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಭಕ್ತಿಪೂರ್ವಕವಾಗಿ ಈ ಸೀರೆಯ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಭಕ್ತವೃಂದ ಸೇರಿ ಚಿನ್ನದ ಸೀರೆಯನ್ನು ಅರ್ಪಿಸಿದ್ದಾರೆ. ಈ ಸೀರೆಯು ಅತ್ಯಂತ ಆಕರ್ಷಕವಾಗಿದೆ. ವಿಶಿಷ್ಟ ವಿನ್ಯಾಸದಲ್ಲಿ ತಯಾರು ಮಾಡಲಾಗಿದೆ. ಸೀರೆ ಅರ್ಪಿಸಿದ ನಂತರ ಭಕ್ತರು ಶ್ರೀಗಳಿಂದ ಗೌರವ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ಶ್ರೀ ಪದ್ಮಾವತಿ ಮಾತಾಕೀ ಜೈ ಎಂಬ ಹರ್ಷೋದ್ಗಾರವನ್ನು ಭಕ್ತರು ಮೊಳಗಿಸಿದರು.
ಇದನ್ನೂ ಓದಿ:ಭಕ್ತರ ಇಷ್ಟಾರ್ಥ ಈಡೇರಿಸುವ ವಡನಬೈಲು ಪದ್ಮಾವತಿ ದೇವಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ವಿಶೇಷತೆ ಗೊತ್ತೇ?