ಹನುಮ ಜಯಂತಿ ಹಿನ್ನೆಲೆ ಮಾಲಾಧಾರಿಗಳಿಂದ ಸಿದ್ದರಬೆಟ್ಟಕ್ಕೆ ಪಾದಯಾತ್ರೆ - ಹನುಮ ಮಾಲಾಧಾರಿಗಳು
ಇತಿಹಾಸ ಪ್ರಸಿದ್ಧ ಸಿದ್ದರಬೆಟ್ಟಕ್ಕೆ ಹನುಮ ಮಾಲಾಧಾರಿಗಳು 30 ಕಿ. ಮೀ ಪಾದಯಾತ್ರೆ ನಡೆಸಿದರು. ಹನುಮ ಜಯಂತಿ ಹಿನ್ನೆಲೆ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟಕ್ಕೆ ಪಾದಯಾತ್ರೆ ಮಾಲಾಧಾರಿಗಳು ಪಾದಯಾತ್ರೆ ಕೈಗೊಂಡರು. ನೆಲಮಂಗಲ ನಗರದ ರಾಮಾಂಜನೇಯ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ಸುಮಾರು 30 ಕಿ ಮೀ ದೂರದಲ್ಲಿರುವ ಸಿದ್ದರಬೆಟ್ಟದಲ್ಲಿ ಅಂತ್ಯವಾಗಲಿದೆ. 9 ದಿನಗಳಿಂದ ಹನುಮ ಮಾಲೆ ಧರಿಸಿ ವ್ರತ ಆಚರಣೆ ಮಾಡುತ್ತಿದ್ದ 500 ಕ್ಕೂ ಹೆಚ್ಚು ಮಾಲಾಧಾರಿಗಳು ಪಾದಯಾತ್ರೆ ಕೈಗೊಂಡರು. ಬೆಳ್ಳಿರಥದಲ್ಲಿ ಹನುಮನ ಫೋಟೋ ಇಟ್ಟು, ಹನುಮ ಭಜನೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮೆರವಣಿಗೆ ಸಾಗಿತು.
Last Updated : Feb 3, 2023, 8:34 PM IST