ಬೀದರ್ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ- ಹುಬ್ಬಳ್ಳಿಯಲ್ಲಿ ವೃದ್ಧೆಗೆ ಕಪಾಳಮೋಕ್ಷ: ವಿಡಿಯೋ ಜಾಲತಾಣದಲ್ಲಿ ವೈರಲ್
ಹುಬ್ಬಳ್ಳಿ/ಬೀದರ್:ರಾಜ್ಯ ಸರ್ಕಾರ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ನೀಡುತ್ತಿದಂತೆ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕೆಲ ದಿನಗಳ ಹಿಂದೆ ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರು ಕಿತ್ತಾಡಿಕೊಂಡಿದ್ದ ಘಟನೆ ಬಾರಿ ಸುದ್ದಿಯಾಗಿತ್ತು. ಇದೀಗ ಅಂತಹುದ್ದೇ ಘಟನೆ ಕುಂದಗೋಳ ಹುಬ್ಬಳ್ಳಿ ಬಸ್ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕಿ ಹಾಗೂ ವೃದ್ಧೆಯ ನಡುವೆ ಗಲಾಟೆ ನಡೆದಿದ್ದು, ಇಬ್ಬರು ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡಿದ್ದಾರೆ. ಕೋಪಗೊಂಡ ನಿರ್ವಾಹಕಿ ಬಸ್ನಲ್ಲೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ್ದಾರೆ.
ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗ ಮಧ್ಯೆ ಶೆರೆವಾಡ ಗ್ರಾಮದ ಬಳಿ ನಿರ್ವಾಹಕಿ ಹಾಗೂ ವೃದ್ಧ ಮಹಿಳೆ ನಡುವೆ ಟಿಕೆಟ್ ಹಾಗೂ ಸೀಟು ಸಲುವಾಗಿ ಜಗಳ ಆರಂಭವಾಗಿದೆ. ಈ ಜಗಳ ಅತಿರೇಕಕ್ಕೆ ಹೋಗಿದ್ದು ವೃದ್ಧ ನಿರ್ವಾಹಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ನಿರ್ವಾಹಕಿ ವೃದ್ಧೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸಹ ಪ್ರಯಾಣಿಕರು ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ನಿರ್ವಾಹಕಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.
ಸೀಟಿಗಾಗಿ ಬಸ್ನಲ್ಲೇ ಕಿತ್ತಾಡಿಕೊಂಡ ಮಹಿಳೆಯರು:ಭಾಲ್ಕಿಯಿಂದ ಹಳ್ಳಿಖೇಡ್ಗೆ ಹೋರಟಿದ್ದ ಬಸ್ನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದ ಬಳಿ ನಡೆದಿದೆ. ಒಬ್ಬ ಮಹಿಳೆ ತನಗೂ ಈ ಸೀಟಿನಲ್ಲಿ ಜಾಗ ಬಿಡು ಎಂದಿದ್ದಾಳೆ. ಆಗ ಸೀಟಿನಲ್ಲಿ ಕುಳಿತ ಮಹಿಳೆ ಆಗಲ್ಲಾ ಎಂದಿದ್ದು, ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಮಾತು ತಾರಕಕ್ಕೇರಿ ಕೈ ಕೈ ಮಿಲಾಸಿಕೊಂಡಿದ್ದಾರೆ. ನಂತರ ಬಸ್ನಲ್ಲಿದ್ದ ಇತರ ಪ್ರಯಾಣಿಕರು ಪರಸ್ಪರ ಬೈದಾಡುತ್ತಾ ಕಿತ್ತಾಡುತ್ತಿದ್ದ ಮಹಿಳೆಯರನ್ನು ಸುಮ್ಮನಾಗಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಸರ್ಕಾರಿ ಬಸ್ನಲ್ಲಿ ಸೀಟ್ಗಾಗಿ ನಾರಿಯರ ಕಿತ್ತಾಟ: ವೈರಲ್ ವಿಡಿಯೋ