ಪದವಿ ಪೂರೈಸಿ 180 ದಿನಗಳವರೆಗೆ ಮನೆಯಲ್ಲೇ ಇದ್ದವರಿಗೆ ಯುವನಿಧಿ: ತೃತೀಯ ಲಿಂಗಿಗಳಿಗೂ ಅನ್ವಯ!
ಬೆಂಗಳೂರು:2022 - 23 ರಲ್ಲಿ ವ್ಯಾಸಂಗ ಮಾಡಿ ಉತೀರ್ಣರಾದ ಪದವೀಧರರಿಗೆ ಮುಂದಿನ 24 ತಿಂಗಳ ವರೆಗೆ ಪ್ರತಿ ತಿಂಗಳೂ ನಿರುದ್ಯೋಗ ಭತ್ಯೆ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪ್ರೋಫೆಷನಲ್ ಕೋರ್ಸ್ ಸೇರಿದಂತೆ ಎಲ್ಲ ಪದವೀಧರರಿಗೆ ಪ್ರತಿ ತಿಂಗಳೂ 3,000 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ ಪ್ರತಿ ತಿಂಗಳೂ 1,500 ರೂ. ಭತ್ಯೆ ಸಿಗಲಿದೆ. ಒಂದು ವೇಳೆ ಯೋಜನೆಯ ನಡುವಲ್ಲೇ ನಿರುದ್ಯೋಗಿ ಫಲಾನುಭವಿಗೆ ಕೆಲಸ ಸಿಕ್ಕಿದರೆ ಅವರಿಗೆ ಈ ಯೋಜನೆ ಅನ್ವಯ ಆಗಲ್ಲ ಎಂದರು.
ಎಲ್ಲ ಅನ್ ಎಂಪ್ಲಾಯ್ಡ್ ಆದವರಿಗೆ ಹಾಗೂ ಅರ್ಜಿ ಹಾಕಿದವರಿಗೆ ತಿಂಗಳಿಗೆ ಯಾವುದೇ ಜಾತಿ, ಧರ್ಮ, ಲಿಂಗ ನೋಡದೇ ಯೋಜನೆ ಜಾರಿಗೆ ಮಾಡಲಾಗುವುದು. ದ್ವಿ, ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಕಾಂಗ್ರೆಸ್ ನೀಡಿದ ಎಲ್ಲ ಐದು ಯೋಜನೆಗಳನ್ನು ಜಾರಿಗೆ ಮಾಡಲು ನಮ್ಮ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ಪದವಿ ಪೂರೈಸಿ 180 ದಿನಗಳಾಗಿದ್ದು, ನೌಕರಿ ಸಿಗದವರು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಮಾಡಿಕೊಳ್ಳಬಹುದು. ನೌಕರಿ ಇಲ್ಲದ ಯುವಕರಿಗೆ 2 ವರ್ಷ ಹಣ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಜೂ.11 ರಿಂದ ಬಸ್ ಪ್ರಯಾಣ ಫ್ರೀ..ಫ್ರೀ.. ನನ್ನ ಹೆಂಡತಿಗೂ ಉಚಿತ, ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಉಚಿತ ಎಂದ ಸಿಎಂ