ಕರ್ನಾಟಕ

karnataka

ಸರಗಳ್ಳತ

ETV Bharat / videos

ಸರಗಳ್ಳರಿದ್ದಾರೆ ಎಚ್ಚರ! ಪವಾಡದಂತೆ ಚಿನ್ನದ ಸರ, ಪ್ರಾಣ ಉಳಿಸಿಕೊಂಡ ಗಟ್ಟಿಗಿತ್ತಿ- ವಿಡಿಯೋ - ಈಟಿವಿ ಭಾರತ ಕನ್ನಡ

By

Published : May 17, 2023, 9:11 AM IST

ಕೊಯಂಬತ್ತೂರು (ತಮಿಳುನಾಡು):ಕೊಯಂಬತ್ತೂರುನಗರದಲ್ಲಿ ಸರಗಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಂಗಳವಾರ ಹಾಡಹಗಲೇ ನಡೆದ ಘಟನೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕದಿಯಲು ಖದೀಮರು ಯತ್ನಿಸಿದ್ದಾರೆ. 33 ವರ್ಷದ ಮಹಿಳೆ ಕೌಶಲ್ಯ ಎಂಬಾಕೆ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಖದೀಮರು ಒಂಟಿ ಮಹಿಳೆಯನ್ನು ಕಂಡು ಅವರ ಕತ್ತಿನಲ್ಲಿದ್ದ ಸರಕ್ಕೆ ಕೈ ಹಾಕಿ ಎಳೆದಿದ್ದಾರೆ. ಮಹಿಳೆ ಕೂಡಲೇ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. 

ಇಷ್ಟಾದರೂ ಬಿಡದ ಖದೀಮರು ಬಲವಾಗಿ ಸರ ಎಳೆಯಲು ಯತ್ನಿಸಿದ್ದಾರೆ. ಕೌಶಲ್ಯ ರಸ್ತೆಗೆ ಬಿದ್ದರೂ ಸರ ಹಿಡಿದ ಕೈಯನ್ನು ಸಡಿಸಲಿಲ್ಲ. ಇದನ್ನು ಗಮನಿಸಿದ ಕಳ್ಳರು ಪರಾರಿಯಾಗಿದ್ದಾರೆ. ಮಹಿಳೆ ಪ್ರಾಣ ಮತ್ತು ಚಿನ್ನದ ಸರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ನೀಡಿದ ದೂರು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಗರ ಪೊಲೀಸರು ಅಭಿಷೇಕ್ ಮತ್ತು ಶಕ್ತಿವೇಲ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಸಿನಿಮೀಯ ರೀತಿಯಲ್ಲಿ ಸರಗಳ್ಳರನ್ನು ಓಡಿಸಿದ ಸ್ಥಳೀಯ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details