ಕರ್ನಾಟಕ

karnataka

ಬೀದಿ ಬದಿ ಮಲಗಿದ್ದ ಬಿಡಾಡಿ ದನವನ್ನು ಹೊತ್ತೊಯ್ದ ಖದೀಮರು - ವಿಡಿಯೋ

ETV Bharat / videos

ಬೀದಿ ಬದಿ ಮಲಗಿದ್ದ ಬಿಡಾಡಿ ದನವನ್ನು ಹೊತ್ತೊಯ್ದ ಖದೀಮರು: ವಿಡಿಯೋ - ಬಿಡಾಡಿ ದನ

By

Published : Jul 17, 2023, 4:29 PM IST

ವಿಜಯನಗರ: ರಾತ್ರೋರಾತ್ರಿ ನಾಲ್ವರು ಕಳ್ಳರು ಸೇರಿ ರಸ್ತೆಯಲ್ಲಿ ಬದಿ ಮಲಗಿದ್ದ ಬಿಡಾಡಿ ದನವೊಂದನ್ನು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಈ ಕೃತ್ಯದ ದೃಶ್ಯ ಸಿಸಿ‌ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿಯ ಬಯಲು ಜಾಗದಲ್ಲಿ ಮೂರು ದನಗಳು ಮಲಗಿದ್ದವು. ಈ ವೇಳೆ, ಏಕಾಏಕಿ ಬಂದ ನಾಲ್ವರು ಕಳ್ಳರು ದನವೊಂದರ ಕೊಂಬನ್ನು ಹಿಡಿದು, ನಂತರ ಕತ್ತಿಗೆ ಹಗ್ಗವನ್ನು ಕಟ್ಟಿ ಚಿತ್ರಹಿಂಸೆ ನೀಡಿ ಪಿಕಪ್​ ವಾಹನದ ಬಳಿಗೆ ಎಳೆದೊಯ್ದಿದ್ದಾರೆ.

ನಂತರ ನಾಲ್ಕು ಮಂದಿ ಸೇರಿ ಒಂದು ಕಡೆ ಬಾಲ, ಮತ್ತೊಂದು ಕಡೆ ಕೊಂಬನ್ನು ಹಿಡಿದು ಪಿಕಪ್​ ವಾಹನದಲ್ಲಿ ಹತ್ತಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಇನ್ನು ಪೊಲೀಸರು ದನವನ್ನು ಹೊತ್ತೊಯ್ದಿದವರನ್ನು ಅದಷ್ಟು ಬೇಗ ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಒಳಪಡಿಸಿಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ರೀತಿ ಬಿಡಾಡಿ ದನ - ಕಾರುಗಳನ್ನು ಗುರಿಯಾಗಿಸಿಕೊಂಡಿರುವ ಗುಂಪು ಅವುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Watch Video: ಬೆಡ್​ ರೂಮಿಗೆ ಬಂದು ಯುವಕನ ಪಕ್ಕ ಹಾಯಾಗಿ ಮಲಗಿದ್ದ ನಾಗರ ಹಾವು!

ABOUT THE AUTHOR

...view details