ಡಿವೈಡರ್ಗೆ ಗುದ್ದಿ ಪಲ್ಟಿಯಾದ ಬಸ್.. 15 ಪ್ರಯಾಣಿಕರಿಗೆ ಗಾಯ: ಭೀಕರ ವಿಡಿಯೋ - ಭೀಕರ ರಸ್ತೆ ಅಪಘಾತ
ನಂದೂರ್‌ಬಾರ್(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೂರತ್‌ನಿಂದ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರಭಸವಾಗಿ ಬಂದ ಬಸ್ ಡಿವೈಡರ್ಗೆ ಗುದ್ದಿ, ಪಲ್ಟಿಯಾಗಿದೆ. 15 ಪ್ರಯಾಣಿಕರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅಪಘಾತವು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಸಂಭವಿಸಿದೆ. ಅಪಘಾತದ ನಂತರ ಭಾರಿ ಶಬ್ದ ಉಂಟಾಗಿದ್ದು, ಜನರು ಸಹಾಯಕ್ಕಾಗಿ ಕೂಗಿದ್ದರಿಂದ ಸ್ಥಳೀಯರು ಮತ್ತು ಪೊಲೀಸರು ಸಹಾಯಕ್ಕೆ ಧಾವಿಸಿ, ಅವರನ್ನು ರಕ್ಷಣೆ ಮಾಡಿದ್ದಾರೆ.
ಸೂರತ್ನ ಬಸ್ ಅಪಘಾತದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬಸ್ ಡಿವೈಡರ್ಗೆ ಡಿಕ್ಕಿ ಹೊಡೆಯದೇ ಪಕ್ಕದಲ್ಲೇ ಇದ್ದ ಸಬ್ಸ್ಟೇಷನ್ಗೆ ಗುದ್ದಿದ್ದರೆ, ಭಾರಿ ಅವಘಡ ಸಂಭವಿಸುತ್ತಿತ್ತು. ಶಹದಾ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ 132 ಕೆವಿ ಉಪ ಕೇಂದ್ರವು ಅಪಘಾತದ ಹತ್ತಿರದಲ್ಲೇ ಇದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಭವಿಸಿದ ಬಸ್ ಅಪಘಾತದಿಂದ ದೊಡ್ಡ ಸದ್ದು ಉಂಟಾಗಿದ್ದು, ಅಕ್ಕಪಕ್ಕದಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.