ಕರ್ನಾಟಕ

karnataka

ಬಸ್​ ಚಾಲಕ ಆತ್ಮಹತ್ಯೆ

ETV Bharat / videos

ದೇವನಹಳ್ಳಿ: ಬಿಎಂಟಿಸಿ ಬಸ್ ಡಿಪೋ‌ ಮುಂದೆಯೇ ಬಸ್​ ಚಾಲಕ ಆತ್ಮಹತ್ಯೆ - ಬಿಎಂಟಿಸಿ ಬಸ್ ಡಿಪೋ‌ದಲ್ಲಿ ಬಸ್​ ಚಾಲಕ ಆತ್ಮಹತ್ಯೆ

By

Published : Aug 8, 2023, 10:49 AM IST

Updated : Aug 8, 2023, 11:22 AM IST

ದೇವನಹಳ್ಳಿ :ಬಿಎಂಟಿಸಿ ಬಸ್ ಡಿಪೋ‌ ಮುಂದೆಯೇ ಸಾರಿಗೆ ಇಲಾಖೆಯ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಡಿಪೋ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ‌ ಆವತಿ ಮೂಲದ ನಾಗೇಶ್ (45) ಆತ್ಮಹತ್ಯೆಗೆ ಶರಣಾದ ಚಾಲಕ. ಅಂದಹಾಗೆ ಚಾಲಕ‌ ಕಂ ನಿರ್ವಾಹಕನಾಗಿ‌ ಕೆಲಸ ಮಾಡುತ್ತಿದ್ದ ಮೃತ ನಾಗೇಶ್, ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದರು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ನಾಗೇಶ್​ ಕಳೆದ ಮಧ್ಯರಾತ್ರಿ ಡಿಪೋಗೆ ಬಂದು ಡಿಪೋ ಮ್ಯಾನೇಜರ್ ಕೊಠಡಿ ಎದುರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆತ್ಮಹತ್ಯೆಗೆ ಶರಣಾಗಿರುವ ನಾಗೇಶ್​ನನ್ನು ಬೆಳಗ್ಗೆ ನೋಡಿದ ಸಿಬ್ಬಂದಿ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕ ನಾಗೇಶ್ ಆತ್ಮಹತ್ಯೆಗೆ‌ ನಿಖರ ಕಾರಣ ಗೊತ್ತಿಲ್ಲ. ಆದರೆ, ಡಿಪೋ ಮ್ಯಾನೇಜರ್ ಕೊಠಡಿ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಕುರಿತು ಪೊಲೀಸರ ತನಿಖೆಯಿಂದಷ್ಟೆ ನಾಗೇಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

ಇದನ್ನೂ ಓದಿ:ಕಬ್ಬಿಣದ ಸಲಾಕೆಯಿಂದ ತಾಯಿಯನ್ನೇ ಕೊಂದ ಪಾಪಿ ಪುತ್ರ

Last Updated : Aug 8, 2023, 11:22 AM IST

ABOUT THE AUTHOR

...view details