ಕರ್ನಾಟಕ

karnataka

ಬಂಡೀಪುರದಲ್ಲಿ ಆನೆ ಮರಿ ಜನನ..

By

Published : Aug 11, 2023, 12:46 PM IST

ETV Bharat / videos

ಬಂಡೀಪುರದಲ್ಲಿ ಆನೆ ಮರಿ ಜನನ.. ಹೆಣ್ಣು ಮರಿಗೆ ಜನ್ಮ ನೀಡಿದ 'ಐಶ್ವರ್ಯ'

ಚಾಮರಾಜನಗರ: ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾಯ್ತನದ ಸಂಭ್ರಮ ಮನೆ ಮಾಡಿದೆ. ಐಶ್ವರ್ಯ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.

ಹೌದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಐಶ್ವರ್ಯ ಎಂಬ ಆನೆ ಹೆಣ್ಣು ಮರಿಗೆ ಜನ್ಮನೀಡಿದ್ದು, ಶಿಬಿರದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ ಮತ್ತು ಮರಿ ಆನೆ ಆರೋಗ್ಯವಾಗಿವೆ. ಮರಿ ಆನೆ ತಾಯಿಯೊಂದಿಗೆ ಲವ - ಲವಿಕೆಯಿಂದ ಆಟವಾಡುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಂಪುರ ಆನೆ ಶಿಬಿರದಲ್ಲಿ ಒಟ್ಟು 21 ಆನೆಗಳಿದ್ದು, ಐಶ್ವರ್ಯ ಮರಿಗೆ ಜನ್ಮ ನೀಡಿದ ಬಳಿಕ ಈಗ ಅವುಗಳ ಸಂಖ್ಯೆ 22ಕ್ಕೆ ಏರಿಕೆ ಕಂಡಿದೆ. 

ಆನೆಗಳ‌ ಸಂಖ್ಯೆಯಲ್ಲಿ ಬಂಡೀಪುರ ನಂ 1: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆನೆಗಳ ಸಂಖ್ಯೆಯಲ್ಲೂ ಮೊದಲ ಸ್ಥಾನದಲ್ಲಿದೆ. ಬುಧವಾರ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಗಣತಿ ಅಂಕಿ - ಅಂಶದಲ್ಲಿ ಬಂಡೀಪುರದಲ್ಲಿ 1,116 ಗಜಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಗಜ ಪಡೆಗಳ ಬೀಡಾದ ಗಡಿ ಜಿಲ್ಲೆ ಚಾಮರಾಜನಗರ.. ಬಂಡೀಪುರ ಬೃಹತ್​ ಆನೆ ವಾಸ ಸ್ಥಾನ

ABOUT THE AUTHOR

...view details