ಕರ್ನಾಟಕ

karnataka

ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ETV Bharat / videos

22 ಅಡಿ ಉದ್ದದ ಒಂದು ಲಕ್ಷ ವಿಭಿನ್ನ ಪುಷ್ಪಗಳಿಂದ ಮಹಾಶಿವರಾತ್ರಿ ಆಚರಣೆ.. - ಪುರಾತನ ಕಾಡುಮಲ್ಲೇಶ್ವರ ದೇವಸ್ಥಾನ

By

Published : Feb 18, 2023, 6:50 PM IST

Updated : Feb 18, 2023, 7:00 PM IST

ಬೆಂಗಳೂರು: ನಗರದ ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಶನಿವಾರ (ಫೆ.18) ರಿಂದ ಮೂರು ದಿನಗಳ ಕಾಲ ಮಹಾಶಿವರಾತ್ರಿ, ಬ್ರಹ್ಮ ರಥೋತ್ಸವ ನೆಡೆಯಲಿದೆ. ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, 1 ಲಕ್ಷ ಪುಷ್ಪದಿಂದ ವೈಭವದ ಪುಷ್ಪಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.

ಮಹಾಶಿವರಾತ್ರಿ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಿವೆ. ಸಂಜೆ ಕಾಡು ಮಲ್ಲೇಶ್ವರ ಗೆಳೆಯರ ಬಳಗದಿಂದ ಜಾಗರಣೆ ಪ್ರಯುಕ್ತ ಬಂಟ್ವಾಳದ ಯಕ್ಷ ರಂಗ ತಂಡದಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನವಿದೆ. ಸಂಜೆಯಿಂದ ಬೆಳಗ್ಗೆವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

800 ವರ್ಷ ಹಳೆಯ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ: ಯಲಹಂಕದ ಚಿಕ್ಕಬೊಮ್ಮಸಂದ್ರದಲ್ಲಿನ ಇತಿಹಾಸ ಪ್ರಸಿದ್ಧ 800 ವರ್ಷಗಳ ಹಳೆಯ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದವು. ಸಾವಿರಾರು ಜನ ಭಕ್ತರು ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದು, ಪೂಜಾಕಾರ್ಯದಲ್ಲಿ ಭಾಗಿಯಾದರು. ಈ ವೇಳೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೋಮೇಶ್ವರ ದೇವರಿಗೆ ಅಭಿಷೇಕ ಮಾಡಿಸಿದರು.

ರಥೋತ್ಸವಕ್ಕೆ ಚಾಲನೆ: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗದ ವತಿಯಿಂದ ಸೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ನಡೆದ ರಥೋತ್ಸವಕ್ಕೆ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ರಥವನ್ನು ಎಳೆಯುವುದರ ಮೂಲಕ ಚಾಲನೆ ನೀಡಿದರು.

ಇದನ್ನೂ ಓದಿ:ಶಿವರಾತ್ರಿ ಸಂಭ್ರಮ: ಬಿಸಿಲು ನಾಡಿನಲ್ಲಿ ಕಣ್ಮನ ಸೆಳೆದ ಕಡ್ಲೆಕಾಯಿ ಶಿವಲಿಂಗ

Last Updated : Feb 18, 2023, 7:00 PM IST

ABOUT THE AUTHOR

...view details