ಕರ್ನಾಟಕ

karnataka

ಅಮರನಾಥನ ದರ್ಶನ ಪಡೆದ ಸೈನಾ ನೆಹ್ವಾಲ್

ETV Bharat / videos

ಕುಟುಂಬಸ್ಥರೊಂದಿಗೆ ಅಮರನಾಥನ ದರ್ಶನ ಪಡೆದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ - ಪವಿತ್ರ ಶಿವಲಿಂಗಕ್ಕೆ ಭೇಟಿ

By

Published : Jul 13, 2023, 2:20 PM IST

ಅಮರನಾಥ (ಜಮ್ಮು ಮತ್ತು ಕಾಶ್ಮೀರ ) : ಜಮ್ಮು ಮತ್ತು ಕಾಶ್ಮೀರದ ಹೆಬ್ಬಾಗಿಲು ಲಖನ್‌ಪುರದಿಂದ ಬಾಬಾ ಬರ್ಫಾನಿಯ ಗುಹೆಯವರೆಗೂ ಭಂ ಭಂ ಭೋಲೆ ಜಯಘೋಷಗಳು ಪ್ರತಿಧ್ವನಿಸುತ್ತಿವೆ. ಸಾಂಪ್ರದಾಯಿಕ ಬಲ್ತಾಲ್ ಮತ್ತು ಪಹಲ್ಗಾಮ್‌ನ ಬಾಬಾ ಬರ್ಫಾನಿಯಿಂದ ಸಹಸ್ರಾರು ಭಕ್ತರು ಅತೀವ ಉತ್ಸಾಹ ಮತ್ತು ಹುರುಪಿನಿಂದ ಮುನ್ನಡೆಯುತ್ತಿದ್ದಾರೆ. ಈ ಬಾರಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೂ ಕೂಡ ಕುಟುಂಬಸ್ಥರೊಂದಿಗೆ ಆಗಮಿಸಿ, ಅಮರನಾಥನ ದರ್ಶನ ಪಡೆದರು.

ಈ ಕುರಿತು ವಿಡಿಯೋ ಹಂಚಿಕೊಡ ಅವರು, "ಅಮರನಾಥನ ದರ್ಶನ ಮಾಡಿದ್ದೇನೆ. ನನ್ನ ತಾಯಿಯೊಂದಿಗೆ ಭೋಲೆನಾಥನ ದರ್ಶನ ಪಡೆದಿರುವುದು ನನ್ನ ಅದೃಷ್ಟ. ನಮಗೆ ಸಹಾಯ ಮಾಡಿದ ಅಮರನಾಥ ದೇಗುಲ ಮಂಡಳಿ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದ ಹೇಳಬಯಸುತ್ತೇನೆ. ನೀವು ಸಕಾರಾತ್ಮಕತೆ ಮತ್ತು ಶಕ್ತಿಯನ್ನು ಪಡೆಯುವ ಸ್ಥಳಕ್ಕೆ ಭೇಟಿ ನೀಡಿದಾಗ ಮನಸ್ಸು ಶಾಂತಗೊಳ್ಳುತ್ತದೆ ಆತ್ಮವಿಶ್ವಾಸ ಹೆಚ್ಚುತ್ತದೆ. ನನಗೆ ಇದೊಂದು ಅದ್ಭುತ ಅನುಭವ" ಎಂದಿದ್ದಾರೆ.

ಬುಧವಾರ 9,155 ಭಕ್ತರು ಪವಿತ್ರ ಗುಹೆಯಲ್ಲಿ ದೇವರ ದರ್ಶನ ಪಡೆದಿದ್ದಾರೆ. ಜುಲೈ 1ರಿಂದ ಒಟ್ಟು 1,46,508 ಯಾತ್ರಾರ್ಥಿಗಳು ಶಿವಲಿಂಗಕ್ಕೆ ಭೇಟಿ ನೀಡಿದ್ದಾರೆ. ಬುಧವಾರ ಭೇಟಿ ನೀಡಿದ ಯಾತ್ರಾರ್ಥಿಗಳಲ್ಲಿ 6,995 ಪುರುಷರು, 1918 ಮಹಿಳೆಯರು, 122 ಮಕ್ಕಳು ಮತ್ತು 120 ಸಾಧುಗಳು ಇದ್ದರು.

ಇದನ್ನೂ ಓದಿ :ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿ ಅಮರನಾಥ ಯಾತ್ರೆ ಕೈಗೊಂಡ ಇಬ್ಬರು ಅಮೆರಿಕ ಪ್ರಜೆಗಳು!

ABOUT THE AUTHOR

...view details