ಚಾರ್ಧಾಮ್ ಯಾತ್ರೆ 2023: ಉಖಿಮಠದಿಂದ ಕೇದಾರನಾಥ ದೇವಸ್ಥಾನಕ್ಕೆ ಡೋಲಿ ಯಾತ್ರೆ
ಉಖಿಮಠ (ಉತ್ತರಾಖಂಡ): ಹಿಂದೂ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ ದೇವಸ್ಥಾನದ ಬಾಗಿಲು ತೆರೆಯುವ ಹಿನ್ನೆಲೆ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಇರಿಸಲಾಗಿದ್ದ ಕೇದಾರನಾಥ ಡೋಲಿಯನ್ನು ಕೇದಾರನಾಥ ಮಂದಿರಕ್ಕೆ ಮೇಳ ವಾದ್ಯಗಳೊಂದಿಗೆ ಕೊಂಡೊಯ್ಯಲಾಯಿತು. ಈ ವೇಳೆ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಡೋಲಿ ಜೊತೆ ಹೆಜ್ಜೆ ಹಾಕತೊಡಗಿದರು. ಇದರಲ್ಲಿ ಸ್ಥಳೀಯ ಶಾಸಕಿ ಆಶಾ ನೌಟಿಯಾಲ್ ಕೂಡ ಭಾಗಿಯಾಗಿದ್ದರು. ಆರು ತಿಂಗಳುಗಳ ಕಾಲ ದೇವಸ್ಥಾನವು ಸಂಪೂರ್ಣ ಹಿಮದಿಂದ ಆವರಿಸಿರುತ್ತದೆ. ಆದ ಕಾರಣ ಕೇದಾರನಾಥನ ಡೋಲಿಯನ್ನು ಉಖಿಮಠಕ್ಕೆ ಕೊಂಡೋಯ್ದು ದಿನವು ಪೂಜೆ ಸಲ್ಲಿಸಲಾಗುತ್ತದೆ.
ಕೇದರನಾಥ ಡೋಲಿ ಯಾತ್ರೆಯಲ್ಲಿ ಭಾಗಿಯಾಗಲು ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಇನ್ನು ಕೇದರನಾಥೇಶ್ವರನ ಗರ್ಭಗುಡಿ ಬಾಗಿಲುಗಳು ತೆಗೆಯುವ ಮುನ್ನ ಡೋಲಿ ಯಾತ್ರೆ ನಡೆಯುತ್ತದೆ. ಕೇದಾರನಾಥ ಬಾಗಿಲು ತೆರೆದ ನಂತರ ಮೊದಲ ದರ್ಶನ ಪಡೆಯಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದಿನದಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡೋಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬಳಿಕ ಎಂದಿನಂತೆ ದಿನವು ಕೇದಾರನಾಥೇಶ್ವರನ ಪೂಜೆ ಮುಂದುವರೆಯುತ್ತದೆ. ಇನ್ನು 54 ವರ್ಷಗಳಿಂದಲೂ ಕೋಲ್ಕತ್ತಾದ ಭಕ್ತರೊಬ್ಬರು ಕೇದಾರನಾಥೇಶ್ವರ ಡೋಲಿ ಯಾತ್ರೆಯಲ್ಲಿ ಭಾಗಿಯಾಗುತ್ತಿರುವುದು ವಿಶೇಷ.
ಇದನ್ನೂ ಓದಿ:ಕೇದಾರನಾಥ ಸುತ್ತಲೂ 15 ಅಡಿ ಹಿಮಾವೃತ: ಈ ಬಾರಿ ಹಿಮ ನದಿಗಳಲ್ಲಿ ಯಾತ್ರಿಕರ ಪಯಣ