ಕರ್ನಾಟಕ

karnataka

ಮಕ್ಕಳ ಎತ್ತಿ ನೆಲಕ್ಕೆ ಕುಕ್ಕಿದ ಮಹಿಳಾ ಅಧಿಕಾರಿ

ETV Bharat / videos

ದತ್ತು ಸ್ವೀಕಾರ ಕೇಂದ್ರದಲ್ಲಿ ಮಕ್ಕಳ ಮೇಲೆ ಮಹಿಳಾಧಿಕಾರಿಯ ದೌರ್ಜನ್ಯ: ವಿಡಿಯೋ ವೈರಲ್​ - ಚಿಕ್ಕ ಮಕ್ಕಳ ಮೇಲೆ ಅಧಿಕಾರಿ ದೌರ್ಜನ್ಯ

By

Published : Jun 5, 2023, 4:03 PM IST

ಕಂಕೇರ್ (ಛತ್ತೀಸ್​ಗಢ):ಛತ್ತೀಸ್​ಗಢದ ದತ್ತು ಮಕ್ಕಳ ಸ್ವೀಕಾರ ಕೇಂದ್ರವೊಂದರಲ್ಲಿ ಚಿಕ್ಕ ಮಕ್ಕಳನ್ನು ಹಿಂಸಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಇಲ್ಲಿನ ಕಂಕೇರ್​ನಲ್ಲಿರುವ ಕೇಂದ್ರದ ಮಹಿಳಾ ವ್ಯವಸ್ಥಾಪಕಿ​ ಮಕ್ಕಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ವ್ಯವಸ್ಥಾಪಕಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ದತ್ತು ಸ್ವೀಕಾರ ಕೇಂದ್ರದಲ್ಲಿ ಹೆಣ್ಣು ಮಗುವಿನ ಮೇಲೆ ಮಹಿಳಾ ಮ್ಯಾನೇಜರ್​ ದೌರ್ಜನ್ಯ ಎಸಗುತ್ತಿದ್ದು, ಕೂದಲು ಹಿಡಿದು ಎತ್ತಿ ನೆಲಕ್ಕೆ ಕುಕ್ಕಿದ್ದಾಳೆ. ಬಳಿಕ ಮಗುವನ್ನು ಎಳೆದು ಮಂಚದ ಮೇಲೆ ಬಿಸಾಡಿದ್ದಾಳೆ. ಇಷ್ಟಕ್ಕೆ ಬಿಡದೆ ಕೋಪೋದ್ರಿಕ್ತರಾಗಿದ್ದ ಆಕೆ​ ಇನ್ನೊಂದು ಮಗುವಿನ ಮೇಲೂ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ.

ಕಠಿಣ ಶಿಕ್ಷೆಗೆ ಒತ್ತಾಯ: ಮಕ್ಕಳಿಬ್ಬರು ನೋವಿನಿಂದ ಕಿರುಚಾಡಿದರೂ ಬಿಡದ ಆಕೆ ಹಲ್ಲೆ ಮಾಡುತ್ತಿರುತ್ತಾಳೆ. ಈ ವೇಳೆ ಕೇಂದ್ರದ ಸಿಬ್ಬಂದಿಯೊಬ್ಬರು ನೋಡಿದರೂ, ಏನೊಂದೂ ಪ್ರಶ್ನಿಸದೇ ಅಲ್ಲಿಂದ ಹೊರಡುತ್ತಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮಹಿಳಾಧಿಕಾರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದಕ್ಕೂ ಹಿಂದೆ ಇದೇ ಮ್ಯಾನೇಜರ್​ ವಿರುದ್ಧ ದೂರು ನೀಡಿದ 8 ಸಿಬ್ಬಂದಿಯನ್ನೇ ಕೇಂದ್ರದಿಂದ ವಜಾ ಮಾಡಲಾಗಿತ್ತು!. ಹೀಗಾಗಿ ಸಿಬ್ಬಂದಿ ಆಕೆಯನ್ನು ಪ್ರಶ್ನಿಸಲೂ ಹೆದರುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಟೋಲ್ ಹಣದ ವಿಚಾರಕ್ಕೆ ಗಲಾಟೆ.. ಯುವಕನನ್ನು ಹಾಕಿ ಸ್ಟಿಕ್​​ನಿಂದ ಕೊಲೆ ಮಾಡಿದ ದುಷ್ಕರ್ಮಿಗಳು

ABOUT THE AUTHOR

...view details