ಪಂಜಾಬ್ ಹಳ್ಳಿಗಳಲ್ಲಿ ಮೌನ ದೀಪಾವಳಿ.. ವಿಡಿಯೋ - As the festival of lights approaches
🎬 Watch Now: Feature Video
Published : Nov 8, 2023, 9:38 PM IST
ಬಟಿಂಡಾ : ಇಡೀ ದೇಶವೇ ದೀಪಾವಳಿಗಾಗಿ ಕಾತರದಿಂದ ಕಾಯುತ್ತಾ ಪಟಾಕಿ ಸಿಡಿಸಲು ಹಾಗೂ ದೀಪಾಲಂಕಾರ ಮಾಡಲು ಮುಂದಾಗಿದ್ದರೆ, ಪಂಜಾಬ್‌ನ ಬಟಿಂಡಾದ ಮೂರು ಗ್ರಾಮಗಳು ಸೇನಾ ಕಂಟೋನ್ಮೆಂಟ್ ಮತ್ತು ಮದ್ದುಗುಂಡುಗಳ ಉಗ್ರಾಣಕ್ಕೆ ಸಮೀಪದಲ್ಲಿರುವುದರಿಂದ ಹಲವು ದಶಕಗಳಿಂದ ಮೂಕ ದೀಪಾವಳಿ ಹಬ್ಬವನ್ನು ಆಚರಿಸುತ್ತಿವೆ.
ಫೂಸ್ ಮಂಡಿ, ಭಾಗು ಮತ್ತು ಗುಲಾಬ್‌ಗಢ ಗ್ರಾಮಗಳಲ್ಲಿ ಪಟಾಕಿಗಳನ್ನು ಬಳಸದಂತೆ ಮತ್ತು ಹುಲ್ಲು ಸುಡದಂತೆ ಆಡಳಿತದಿಂದ ಕಟ್ಟುನಿಟ್ಟಿನ ನಿರ್ದೇಶನಗಳಿವೆ. ಹೀಗಾಗಿ ಕಳೆದ ಐದು ದಶಕಗಳಿಂದ ನಾವು ದೀಪಾವಳಿ ಆಚರಿಸಿಲ್ಲ ಎಂದು ಈ ಗ್ರಾಮಗಳ ಹಿರಿಯರು ತಿಳಿಸಿದ್ದಾರೆ. ದೊಡ್ಡ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ 1976 ರಲ್ಲಿ ಮಿಲಿಟರಿ ಕಂಟೋನ್ಮೆಂಟ್ ಅನ್ನು ನಿರ್ಮಿಸಲಾಯಿತು ಎಂದು ಅವರು ಹೇಳಿದ್ದಾರೆ.
ದೀಪಾವಳಿಯಂದು ಮಕ್ಕಳು ಪಟಾಕಿ ಸಿಡಿಸುವಂತೆ ಒತ್ತಾಯಿಸಿದರೆ, ಅವರನ್ನು ಅವರ ತಾಯಿಯ ಮನೆ ಅಥವಾ ಅವರ ಚಿಕ್ಕಮ್ಮನ ಮನೆಗೆ ಕಳುಹಿಸಲಾಗುತ್ತದೆ. ಆಡಳಿತಾತ್ಮಕ ಸೂಚನೆಗಳಿಗೆ ವಿರುದ್ಧವಾಗಿ ಯಾರಾದರೂ ಪಟಾಕಿ ಸಿಡಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗ್ರಾಮದ ಹಿರಿಯರು ಹೇಳಿದ್ದಾರೆ.
"ಗ್ರಾಮದ ಯಾವುದೇ ವ್ಯಕ್ತಿ ರಾತ್ರಿಯಲ್ಲಿ ತನ್ನ ಹೊಲಕ್ಕೆ ನೀರು ಹಾಕಲು ಅಥವಾ ಹೊಲದಲ್ಲಿ ಚಹಾ ಮಾಡಲು ಪ್ರಯತ್ನಿಸಿದರೆ, ಸೇನೆಯು ತಕ್ಷಣವೇ ಆಗಮಿಸುತ್ತದೆ ಮತ್ತು ಆ ಪ್ರದೇಶದಲ್ಲಿ ಬೆಂಕಿ ಹಚ್ಚದಂತೆ ವ್ಯಕ್ತಿಯನ್ನು ಎಚ್ಚರಿಸುತ್ತದೆ" ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ನಿಷೇಧ; ಪಟಾಕಿ ಸಿಡಿಸಿದರೆ ದಂಡದ ಬರೆ!