108 ಫ್ಲಾಟ್‌ಗಳಿರುವ 18 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ವಿಡಿಯೋ
Published : Jan 13, 2024, 6:18 PM IST
ಥಾಣೆ(ಮಹಾರಾಷ್ಟ್ರ): ಡೊಂಬಿವಿಲಿಯ ಖೋನಿ ಪಲವಾದಲ್ಲಿನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ನಾಲ್ಕು ಫೈಯರ್ ಇಂಜಿನ್ಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
"108 ಫ್ಲಾಟ್‌ಗಳಿರುವ 18 ಅಂತಸ್ತಿನ ಕಟ್ಟಡದಲ್ಲಿ ಮಧ್ಯಾಹ್ನ 1:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಎರಡು ಫೈಯರ್ ಇಂಜಿನ್ಗಳ ಮೂಲಕ ಸತತ ಬಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಬೆಂಕಿಯು ಕಟ್ಟಡದ ನೆಲ ಮಹಡಿಯಿಂದ ಮೇಲಿನ ಮಹಡಿ ವರೆಗೆ ಹರಡಿತ್ತು. ಪ್ಲಾಸ್ಟಿಕ್ ಉಪಕರಣಗಳು ಸುಟ್ಟು ಹೋಗಿವೆ. ಈ ಬೆಂಕಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಹೇಗೆ ಬೆಂಕಿ ಅವಘಡ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ" ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.
ಕಟ್ಟಡದ ಒಂದು ಬದಿಯಲ್ಲಿ ಮಾತ್ರ ಬೆಂಕಿಯ ಕಾಣಿಸಿಕೊಂಡಿದ್ದರಿಂದ ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರು ಸುರಕ್ಷಿತವಾಗಿ ಕೆಳಗಿಳಿಯುವಲ್ಲಿ ಯಶಸ್ವಿಯಾದರು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಹೈಟೆನ್ಷನ್ ವಿದ್ಯುತ್ ಕಂಬ: ವಿಡಿಯೋ