ಬಂಡೀಪುರ: ಕಾಡಲ್ಲಿ ಒಟ್ಟಿಗೆ 5 ಚಿರತೆ ದರ್ಶನ... ರಾಷ್ಟ್ರೀಯ ಹೆದ್ದಾರಿ ದಾಟಿದ ವ್ಯಾಘ್ರ ಸಮೂಹ! - 5 leopard sighting together in Bandipur forest
Published : Oct 14, 2023, 12:46 PM IST
ಚಾಮರಾಜನಗರ: ಬಂಡೀಪುರ ಈಗ ಹುಲಿ - ಚಿರತೆಗಳ ಅವಾಸಸ್ಥಾನವಾಗಿದ್ದು, ಒಂದಲ್ಲ ಎರಡಲ್ಲ ಒಟ್ಟೊಟ್ಟಿಗೆ 4-5 ಪ್ರಾಣಿಗಳು ದರ್ಶನ ಕೊಡುತ್ತಿವೆ. ಪ್ರಾಣಿಪ್ರಿಯರು ಹುಲಿ, ಚಿರತೆಗಳ ಓಡಾಟ ಕಂಡು ರೋಮಾಂಚನಗೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, ಬಂಡೀಪುರದಲ್ಲಿ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.
ಶುಕ್ರವಾರ ರಾತ್ರಿ ಗುಂಡ್ಲುಪೇಟೆಯಿಂದ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಾದ ನಂತರ ಒಂದರಂತೆ 5 ಹುಲಿಗಳು ರಸ್ತೆ ದಾಟುವ ದೃಶ್ಯ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಗುಂಡ್ಲುಪೇಟೆ ಹರೀಶ್ ಎಂಬುವರು ತಮ್ಮ ಮೊಬೈಲ್ನಲ್ಲಿ ವ್ಯಾಘ್ರ ಸಮೂಹ ರಸ್ತೆ ದಾಟುತ್ತಿರುವ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ಇದ್ದದ್ದರಿಂದ ಆತುರಾತುರವಾಗಿ 5 ಹುಲಿಗಳು ರಸ್ತೆ ದಾಟುತ್ತಿರುವುದನ್ನು ನಾವು ಆ ವಿಡಿಯೋದಲ್ಲಿ ಕಾಣಬಹುದು. ಒಟ್ಟಿನಲ್ಲಿ ಕಾಡಲ್ಲಿ ಚಿರತೆಗಳ ದರ್ಶನ- ರಸ್ತೆಯಲ್ಲಿ ವ್ಯಾಘ್ರ ಸಮೂಹ ಪರಿಸರ ಪ್ರೇಮಿಗಳಲ್ಲಿ ಉಲ್ಲಾಸ ಉಂಟು ಮಾಡಿದೆ.
ಇದನ್ನೂ ಓದಿ :Watch.. ಹುಲಿ ಬಂತು ಹುಲಿ... ಒಡಿಶಾ - ಆಂಧ್ರ ಗಡಿಯಲ್ಲಿ ರಾಯಲ್ ಬೆಂಗಾಲ್ ಟೈಗರ್ ಘರ್ಜನೆ