ಬಸ್ - ಟ್ರಕ್ ಮುಖಾಮುಖಿ ಡಿಕ್ಕಿ: ಐವರು ಸಾವು, 32 ಮಂದಿಗೆ ಗಾಯ - ಸಿಎಂ ಅಶೋಕ್ ಗೆಹ್ಲೋಟ್
ಜೋಧಪುರ (ರಾಜಸ್ಥಾನ): ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿ, ಸುಮಾರು 32 ಮಂದಿ ಗಾಯಗೊಂಡ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಇತ್ತ, ಸಿಎಂ ಅಶೋಕ್ ಗೆಹ್ಲೋಟ್, ಶಾಸಕರಾದ ಕಿಷ್ಣರಾಮ್ ವಿಷ್ಣೋಯ್, ದಿವ್ಯಾ ಮಡೆರ್ನಾ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
Last Updated : Feb 3, 2023, 8:38 PM IST