ಮಕರ ಸಂಕ್ರಾಂತಿ ದಿನ ಅವಘಡ: ಒಂದೇ ಕುಟುಂಬದ ನಾಲ್ವರು ನೀರುಪಾಲು, ಕಾಲ್ತುಳಿತಕ್ಕೆ ಓರ್ವ ಮಹಿಳೆ ಸಾವು - pongal
ಗುಜರಾತ್ನ ಜುನಾಗಢಜಿಲ್ಲೆಯ ಮಲಿಯ ಹಟಿನಾಗೆ ಮಕರ ಸಂಕ್ರಾಂತಿ ಹಬ್ಬ ಆಚರಿಸಲು ಬಂದಿದ್ದ ಒಂದೇ ಕುಟುಂಬದ ನಾಲ್ವರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಭಖರ್ವಾಡ್ ಅಣೆಕಟ್ಟಿನ ಸಮೀಪ ಈ ಘಟನೆ ಸಂಭವಿಸಿದೆ. ಇಬ್ಬರು ಯುವಕರು ಮತ್ತು ಒಬ್ಬ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಯುವಕ ಇನ್ನೂ ಸಿಕ್ಕಿಲ್ಲ. ಮತ್ತೊಬ್ಬ ಯುವಕನ ಪತ್ತೆಗೆ ಯುದ್ಧಾಪಾದಿಯಲ್ಲಿ ತೊಡಗಿದ್ದು, ತಾಲೂಕು ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ. ಒಡಿಶಾದಲ್ಲಿ ಕಾಲ್ತುಳಿತ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೇರಿದ್ದ ಜನಸಂದಣಿಯಿಂದ ನೂಕು ನುಗ್ಗಲು ಉಂಟಾಗಿ ಆಕಸ್ಮಿಕ ತುಳಿತಕ್ಕೊಳಗಾಗಿ ಓರ್ವ ಮಹಿಳೆ ಸಾವಿಗೀಡಾಗಿ, 20 ಭಕ್ತರು ಗಾಯಗೊಂಡಿರುವ ಘಟನೆ ಒಡಿಶಾ ರಾಜ್ಯದ ಕಟಕ್ ಜಿಲ್ಲೆಯ ಮಹಾನದಿ ನದಿಯ ಮೇಲಿರುವ ಬಾದಂಬಾ-ಗೋಪಿನಾಥಪುರ ಟಿ-ಸೇತುವೆ ಬಳಿ ಸಿಂಹನಾಥ ಪೀಠದಲ್ಲಿ ಶನಿವಾರ ಸಂಭವಿಸಿದೆ.