ಬಾಳ ಜಾಣರಿದ್ದೀರಿ ಎಂದ ರಮೇಶ್ ಕುಮಾರ್‌ಗೆ ನಿನ್ನ ಹತ್ರನೇ ಕಲಿತ್ತಿದ್ದೀನಿ ಎಂದ ಸಿದ್ದರಾಮಯ್ಯ - ವಿಧಾನಸಭೆ ಅಧಿವೇಶನ
ವಿಧಾನಸಭೆ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ನವ ಭಾರತಕ್ಕಾಗಿ ನವ ಕರ್ನಾಟಕ ನವ ಭವಿಷ್ಯಕ್ಕಾಗಿ ನವ ನಡಿಗೆ ಎಂದು ಹೇಳಿದ್ದೀರಿ ಎಂದು ಸಿದ್ದರಾಮಯ್ಯ ಅಧಿಕಾರಿಗಳತ್ತ ನೋಡಿ ಹೇಳುತ್ತಿದ್ದರು. ಈ ವೇಳೆ, ಅವರಿಗೆ ಹೇಳಿದ್ರೆ ಅವರೇನ್ ಮಾಡ್ತಾರೆ ಎಂದು ರಮೇಶ್ ಕುಮಾರ್ ಹೇಳಿದ್ರು. ಅವರಿಗೆ ಹೇಳಲ್ಲ ಅವರೇನಾ ಬರೆಯೋದು ಎಂದರು. ಆಗ ರಮೇಶ್ ಕುಮಾರ್ ಬಾಳ ಜಾಣರಿದ್ದೀರಿ ಎಂದರು. ನಿನ್ನ ಹತ್ರನೇ ಕಲಿತ್ತಿದ್ದು ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಕಲಾಪ ನಗೆಗಡಲಲ್ಲಿ ತೇಲಿತು. ಯಾರಿಗೆ ಹೇಳಬೇಕು ಅಂತ ರಮೇಶ್ ಕುಮಾರ್ ನಿಮಗೆ ಗೈಡ್ ಮಾಡಬೇಕಾದ ಪರಿಸ್ಥಿತಿ ಬಂತಲ್ಲಾ ಎಂದು ಸಚಿವ ಜೆಸಿ ಮಾದೇಗೌಡ ಮಧ್ಯ ಪ್ರವೇಸಿದರು. ನೀವು ಅದೇ ಗರಡಿಯಲ್ಲಿ ಪಳಗಿದವರು ಎಂದು ಸಿದ್ದರಾಮಯ್ಯ ಮಾಧುಸ್ವಾಮಿ ಅವರ ಕಾಲೆಳೆದರು.
Last Updated : Feb 3, 2023, 8:18 PM IST