ವಿಡಿಯೋ; ಗುಲ್ಕನ್ ಮಿಲ್ಕ್ಶೇಕ್ ಕುಡಿದಿದ್ದೀರಾ! ಈ ಸಿಂಪಲ್ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ...
ಗುಲ್ಕಂದ್ ಅಥವಾ ಗುಲ್ಕನ್, ಗುಲಾಬಿ ದಳಗಳ ಸಿಹಿ ಖಾದ್ಯ. ಇದನ್ನು ಗುಲಾಬಿ ದಳಗಳನ್ನು ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಗುಲಾಬಿ ಹೂ ನೋಡಲಷ್ಟೇ ಸುಂದರವಲ್ಲ, ಆರೋಗ್ಯಕ್ಕೂ ಅವು ತಂಪಾಗಿರುತ್ತವೆ. ಗುಲ್ಕನ್ ಅನ್ನು ಹಾಲಿಗೆ ಸೇರಿಸಿ ಶೇಕ್ ತಯಾರಾದಾಗ ಅದರ ಸ್ವಾದ ಅದ್ಭುತವಾಗಿರುತ್ತದೆ. ರುಚಿಯ ಜೊತೆಗೆ ಈ ಪಾನೀಯವು ಅಸಿಡಿಟಿ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಗುಲಾಬಿ ದಳಗಳು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ನೀಡುತ್ತದೆ. ತಂಪು ಹಾಲಿಗೆ ಗುಲ್ಕನ್ ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಪುಡಿಮಾಡಿದ ಪಿಸ್ತಾ ಹಾಗೂ ಬಾದಾಮಿ ಹಾಕಿ, ತಾಜಾ ಗುಲಾಬಿ ದಳಗಳಿಂದ ಅಲಂಕರಿಸಿದರೆ ಗುಲ್ಕನ್ ಮಿಲ್ಕ್ಶೇಕ್ ಸಿದ್ಧವಾಗುತ್ತದೆ.