ಕರ್ನಾಟಕ

karnataka

ETV Bharat / videos

ಯುಎಸ್ ಕ್ಯಾಪಿಟಲ್ ಮೇಲಿನ ಮುತ್ತಿಗೆ ಕೊನೆಗೊಳಿಸಬೇಕೆಂದು ಜೋ ಬೈಡನ್ ಒತ್ತಾಯ - ಯುಎಸ್ ಪ್ರತಿಭಟನೆ

By

Published : Jan 7, 2021, 8:06 AM IST

ವಾಷಿಂಗ್ಟನ್ ಡಿಸಿ (ಯುಎಸ್): ಯುಎಸ್ ಕ್ಯಾಪಿಟಲ್ ಜನಸಮೂಹ ಹಿಂಸಾಚಾರದ ನಂತರ, ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರಾಷ್ಟ್ರೀಯ ದೂರದರ್ಶನಕ್ಕೆ ಹೊಗಿ ಗಲಾಟೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. "ಅಧ್ಯಕ್ಷ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ಈ ಮುತ್ತಿಗೆಗೆ ಅಂತ್ಯ ಹಾಡಬೇಕು. ಈ ಸಂಬಂಧ ಅವರು ರಾಷ್ಟ್ರೀಯ ದೂರದರ್ಶನಕ್ಕೆ ಹೋಗಬೇಕೆಂದು ನಾನು ಕರೆ ನೀಡುತ್ತೇನೆ" ಎಂದು ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ. ’’ಇದು ನಮ್ಮ ಪ್ರಜಾಪ್ರಭುತ್ವದ ಮೆಲೆ ದಾಳಿಯಾಗಿದೆ. ಜನ ಪ್ರತಿನಿಧಿಗಳು ಮತ್ತು ಕ್ಯಾಪಿಟಲ್ ಹಿಲ್ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.

ABOUT THE AUTHOR

...view details