ಕಾನ್ಪುರದಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪ್ರಚಾರ: ರಣ್ವೀರ್ - ಆಲಿಯಾ ಕಂಡು ಸಂತಸಪಟ್ಟ ಅಭಿಮಾನಿಗಳು - ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್
ಕಾನ್ಪುರ (ಉತ್ತರಪ್ರದೇಶ): ಬಾಲಿವುಡ್ ಬಹುಬೇಡಿಕೆ ನಟರಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ ರೊಮ್ಯಾಂಟಿಕ್ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'. ಇನ್ನೇನು ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಜೋಡಿಯು ರಾಷ್ಟ್ರದ ಪ್ರಮುಖ ನಗರಗಳಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಇಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಚಿತ್ರದ ಪ್ರೊಮೋಷನ್ ಕೈಗೊಂಡರು.
ಲ್ಯಾಂಡ್‌ಮಾರ್ಕ್ ಹೋಟೆಲ್‌ನ ಒಂಬತ್ತನೆಯ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಕಂಡು ಅಭಿಮಾನಿಗಳು ಖುಷಿ ಪಟ್ಟರು. ಇದೊಂದು ಕೌಟುಂಬಿಕ ಚಿತ್ರ. ನೀವೆಲ್ಲರೂ ಕುಟುಂಬ ಸಮೇತರಾಗಿ ಥಿಯೇಟರ್ಗೆ ಬಂದು ಸಿನಿಮಾ ನೋಡಬೇಕು ಎಂದು ಸ್ಟಾರ್ ತಾರೆಯರು ತಮ್ಮ ಫ್ಯಾನ್ಸ್ ಕೇಳಿಕೊಂಡರು.
ಮುಂದಿನ ಬಾರಿ ಕಾನ್ಪುರಕ್ಕೆ ಬಂದಾಗ ನನ್ನ ಪತ್ನಿ ದೀಪಿಕಾಗೆ ತುಗ್ಗು ಲಡ್ಡು ತಿನ್ನಿಸುತ್ತೇನೆ ಎಂದು ಹೇಳುವ ಮೂಲಕ ರಣ್ವೀರ್ ಜನರನ್ನು ಖುಷಿಪಡಿಸಿದರು. ಆಲಿಯಾ ಭಟ್ ಅವರು ಕಾನ್ಪುರವನ್ನು ಸಂತೋಷದ ನಗರ ಎಂದು ಕರೆದರು. ಖಂಡಿತವಾಗಿಯೂ ಈ ನಗರವು ತುಂಬಾ ಸುಂದರವಾಗಿದೆ. ಇಲ್ಲಿನ ಜನ ತುಂಬಾ ಒಳ್ಳೆಯವರು. ಇಲ್ಲಿನ ಜನರಿಂದ ನಮಗೆ ಅಪಾರ ಪ್ರೀತಿ ಸಿಕ್ಕಿದೆ ಎಂದು ಹೇಳಿದರು.
ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ. ಇದೇ ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.
ಇದನ್ನೂ ಓದಿ:'ಬ್ರೋ' ಟ್ರೇಲರ್ ರಿಲೀಸ್: ಪವನ್ ಕಲ್ಯಾಣ್ - ಸಾಯಿ ತೇಜ್ ಕಾಂಬೋ ಸೂಪರ್