ಕರ್ನಾಟಕ

karnataka

ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿಯಲ್ಲಿ ಭಾಗಿಯಾದ ಅಕ್ಷಯ್​ ಕುಮಾರ್​, ಶಿಖರ್​ ಧವನ್​​

ETV Bharat / videos

ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿಯಲ್ಲಿ ಭಾಗಿಯಾದ ಅಕ್ಷಯ್​ ಕುಮಾರ್​, ಶಿಖರ್​ ಧವನ್​​ - ಅಕ್ಷಯ್​ ಕುಮಾರ್​ ಲೇಟೆಸ್ಟ್ ನ್ಯೂಸ್

By ETV Bharat Karnataka Team

Published : Sep 9, 2023, 1:24 PM IST

ಉಜ್ಜಯಿನಿ (ಮಧ್ಯಪ್ರದೇಶ): ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 56ನೇ ವಸಂತಕ್ಕೆ ಕಾಲಿಟ್ಟ ಹಿಂದಿ ಚಿತ್ರರಂಗದ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಸಂದೇಶಗಳು ಹರಿದುಬರುತ್ತಿವೆ. ತಮ್ಮನ್ನು ಈ ಮಟ್ಟಿಗೆ ಬೆಳೆಸಿದ, ಸಾಧನೆಗೈಯಲು ಆಶೀರ್ವದಿಸಿದ ಆ ಭಗವಂತನಿಗೆ ಬಹುಬೇಡಿಕೆ ನಟ ಧನ್ಯವಾದ ಅರ್ಪಿಸಿದ್ದಾರೆ.

ಜನ್ಮದಿನ ಹಿನ್ನೆಲೆ ಇಂದು ಮುಂಜಾನೆ ನಟ ಅಕ್ಷಯ್​ ಕುಮಾರ್​ ಕುಟುಂಬ ಸಮೇತ ಉಜ್ಜಯಿನಿ ಮಹಾಕಾಳೇಶ್ವರನ ಸನ್ನಿಧಿಗೆ ಆಗಮಿಸಿದ್ದರು. ಕ್ರಿಕೆಟಿಗ ಶಿಖರ್​ ಧವನ್​ ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ಉಪಸ್ಥಿತರಿದ್ದರು. ವಿಭಿನ್ನ ಕ್ಷೇತ್ರದ ದಿಗ್ಗಜರು ಮಹಾಕಾಲ್​ ಭಸ್ಮಾರತಿಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು. 

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ನಮ್ಮ ದೇಶವು ಮತ್ತಷ್ಟು ಬೆಳೆಯಲಿ, ಬಾಬಾರ ಆಶೀರ್ವಾದ ಮುಂದುವರಿಯಲಿ. ದೇಶ ಸಾಕಷ್ಟು ಪ್ರಗತಿ ಹೊಂದಲಿ ಎಂದು ಬೇಡಿಕೊಂಡರು. ಕ್ರಿಕೆಟರ್​ ಶಿಖರ್​ ಧವನ್​​ ಮಾತನಾಡಿ, ಮಹಾಕಾಳೇಶ್ವರ ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ, ಅದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ:Chandramukhi 2: ಬಹುನಿರೀಕ್ಷಿತ 'ಚಂದ್ರಮುಖಿ 2' ಬಿಡುಗಡೆ ದಿನಾಂಕ ಮುಂದೂಡಿಕೆ.. 'ಜವಾನ್​ ಎಫೆಕ್ಟ್'​ ಎಂದ ನೆಟ್ಟಿಗರು

ABOUT THE AUTHOR

...view details