9 ಸೆಕೆಂಡ್ಗಳಲ್ಲಿ ನೀರಿನ ಬಾಟಲ್ ಪುಡಿ ಮಾಡುತ್ತದೆ ಈ ಯಂತ್ರ!
ರಸ್ತೆ ಬದಿ, ಮೈದಾನ, ಪಾರ್ಕ್ ಎಲ್ಲೆಂದರಲ್ಲಿ ನೀರು ಕುಡಿದು ಎಸೆಯುವ ಪ್ಲಾಸ್ಟಿಕ್ ಬಾಟಲ್, ಮೆದು ಪಾನೀಯದ ಬಾಟಲ್ ಗಳನ್ನು ಒಂಬತ್ತು ಸೆಕೆಂಟ್ ನಲ್ಲಿ ಪುಡಿ ಮಾಡುವ ಮಷಿನ್ಗಳು ಬಂದಿದ್ದು, ರಸ್ತೆ ಬದಿಗಳಲ್ಲಿ ಅಳವಡಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದಾರೆ. ವೆಚ್ಚ ಹೆಚ್ಚಾದರೂ ಪರಿಸರ ದೃಷ್ಟಿಯಿಂದ ಒಳ್ಳೆಯದು ಅಂತಾರೆ ತುಮಕೂರಿನ ಗ್ರೀನ್ ರಿಸೈಕ್ಲೋ ಪ್ಲಾಸ್ಟ್ ಸಂಸ್ಥೆಯ ರವಿ.