ಮೈಸೂರಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ... ಜಾನಪದ ಕಲೆಗಳ ಅನಾವರಣ - Multiple National Drama Festival in Mysore
ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಎರಡನೇ ದಿನವಾದ ಇಂದು ಕಿಂದರಜೋಗಿ ಆವರಣದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಮಿಳುನಾಡಿನ ತಂಜಾವೂರಿನ ಜಾನಪದ ನೃತ್ಯ 'ತಪಟ ಕಲ್ಲು ಕುಲು' ಎಂಬ ನೃತ್ಯ ಪ್ರರ್ದಶಿಸಲಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತಮಟೆ ಹಾಗೂ ಡೋಲು ಮಿಶ್ರಿತದ ಶಬ್ದದೊಂದಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕುತ್ತ ನೋಡುಗರಿಗೆ ರಸದೌತಣ ನೀಡಿದರು. ನಂತರ ಬಳ್ಳಾರಿಯ ರಾಮಣ್ಣ ಹಾಗೂ ತಂಡದವರು 'ಗೊಂದಲಿಗರ ಮೇಳ' ದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹಾಗೆಯೇ ಆಂಧ್ರಪ್ರದೇಶದ ಗೋದಾವರಿ ಸಮೀಪವಿರುವ ಬುಡಕಟ್ಟು ಜನರು 'ಕೊಮ್ಮು-ಕೋಯ' ನೃತ್ಯ ಪ್ರದರ್ಶಿಸಿದರು. ಅಲ್ಲದೇ ಮೊದಲ ಬಾರಿಗೆ ಬ್ಯಾರಿ ಅಕಾಡೆಮಿಯಿಂದ ನೃತ್ಯ ಪ್ರದರ್ಶಿಸಲಾಯಿತು.