ಕರ್ನಾಟಕ

karnataka

ETV Bharat / videos

ಬೆಂಗಳೂರಿನಲ್ಲಿ ಕೇಳಿ ಬಂದ ನಿಗೂಢ ಶಬ್ದದ ಕುರಿತು ತಜ್ಞರು ಹೇಳಿದ್ದು ಹೀಗೆ - ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ಬೆಂಗಳೂರಿನ ಮಾಜಿ ಸಂಸ್ಥಾಪಕ ನಿರ್ದೇಶಕ ಪ್ರಕಾಶ್

By

Published : May 20, 2020, 5:18 PM IST

ಬೆಂಗಳೂರು: ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ಮಾಜಿ ಸಂಸ್ಥಾಪಕ ನಿರ್ದೇಶಕ ಪ್ರಕಾಶ್, ಇಂದು ಬೆಂಗಳೂರಿನಲ್ಲಿ ಕೇಳಿ ಬಂದ ನಿಗೂಢ ಶಬ್ದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಪತ್ತು ನಿರ್ವಹಣಾ ಸಂಸ್ಥೆಯಲ್ಲಿ ಹದಿನಾರು ವರ್ಷದ ಅನುಭವ ಇದೆ. ಬೆಂಗಳೂರಿನ ಹಲವಾರು ಕಡೆ ಕೇಳಿ ಬಂದ ಶಬ್ದ ನನ್ನ ಗಮನಕ್ಕೂ ಬಂದಿದೆ. ನನ್ನ ಅನುಭವದ ಪ್ರಕಾರ ಕಲ್ಲು ಗಣಿಗಾರಿಕೆಯ ವೇಳೆ ಕ್ವಾರಿಗಳಲ್ಲಿ ಇಟ್ಟ ಸ್ಫೋಟಕದಿಂದ ಈ ಶಬ್ದ ಬಂದಿರಬಹುದು. ಇಲ್ಲವಾದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಶೇಖರಿಸಿಟ್ಟಿರುವಲ್ಲಿ ಅವಘಡ ಆಗಿರಬಹುದು. ಹವಾಮಾನದ ವೈಪರೀತ್ಯದಿಂದ ಗಾಳಿಯ ಪ್ರೆಶರ್​​​ನಿಂದ ಈ ಶಬ್ದ ಬರಲು ಸಾಧ್ಯವಿಲ್ಲ. ಭೂಕಂಪನದ ಅನುಭವವೂ ಆಗಿಲ್ಲ ಎಂದರು.

ABOUT THE AUTHOR

...view details