ಪ್ರಯಾಣಿಕರಿಲ್ಲದೇ ಬಣಗುಡುತ್ತಿರುವ ಆಟೋಗಳು! - ತುಮಕೂರು ಲೇಟೆಸ್ಟ್ ನ್ಯೂಸ್
ತುಮಕೂರು: ಸರ್ಕಾರ ಇಂದಿನನಿಂದ ಆಟೋ ಚಾಲನೆಗೆ ಅನುವು ಮಾಡಿಕೊಟ್ಟಿದ್ದು, ನಗರದಲ್ಲಿ ಆಟೋಗಳು ಸಂಚಾರ ಆರಂಭವಾಗಿದೆ. ಆದರೆ, ಯಾವುದೇ ಪ್ರಯಾಣಿಕರು ಪ್ರಯಾಣ ಮಾಡುತ್ತಿಲ್ಲ. ಇದರಿಂದ ಆಟೋಗಳು ಬಿಕೋ ಎನ್ನುತ್ತಿವೆ. ಸಾಲಸೋಲ ಮಾಡಿ ಆಟೋ ಖರೀದಿಸಿದ ಚಾಲಕರು ರಸ್ತೆಗಿಳಿದಿದ್ದರು ವ್ಯಾಪಾರವಿಲ್ಲದೇ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಹೆಣಗುತ್ತಿದ್ದಾರೆ. ಈ ಕುರಿತಂತೆ ಒಂದು ವರದಿ.