ಲಿಟಲ್ಮೂನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ... ಮಕ್ಕಳೊಂದಿಗೆ ಪೋಷಕರೂ ಭಾಗಿ - ಲಿಟಲ್ಮೂನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ನಗರದ ಗ್ಯಾಂಗಬಾವಡಿ ಬಡಾವಣೆಯ ಲಿಟಲ್ಮೂನ್ ಶಾಲೆಯಲ್ಲಿ ಮಕ್ಕಳ ಹಾಗೂ ಪಾಲಕರ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಮಕ್ಕಳ ಜೊತೆ ಪೋಷಕರು ಸಹ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪಾಲಕರಿಗೆ ತಲೆ ಮೇಲೆ ಬಿಂದಿಗೆ ಹೊತ್ತು ಗುರಿ ತಲುಪುವುದು, ಬೊಗಸೆಯಲ್ಲಿ ನೀರು ತಂದು ಗ್ಲಾಸ್ ತುಂಬಿಸುವುದು ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ಓಟ, ಕಪ್ಪೆ ಕುಣಿತ ಹಗ್ಗ ಜಗ್ಗಾಟ ಸೇರಿದಂತೆ ಅನೇಕ ಆಟಗಳನ್ನು ಆಡಿಸಲಾಯಿತು. ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಮಕ್ಕಳ ಜೊತೆಯಲ್ಲಿ ಪಾಲಕರು ಸೇರಿ ಆಟವಾಡಿ ತಮ್ಮ ಶಾಲಾ ದಿನಗಳಲ್ಲಿ ಆಡಿದ ಆಟಗಳನ್ನು ಮೆಲುಕು ಹಾಕಿ ಸಂತಸಪಟ್ಟರು.