ಮಾರ್ಕೆಟ್ ರೌಂಡಪ್: 2ನೇ ದಿನವೂ ಗೂಳಿ ಆರ್ಭಟ... ಪೆಟ್ರೋಲ್,ಡಿಸೇಲ್ ಮತ್ತಷ್ಟು ತುಟ್ಟಿ!
ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಕಂಡು ಬಂದಿರುವ ಕಾರಣ ಸಸತ ಎರಡನೇ ದಿನವೂ ಸಂವೇದಿ ಸೂಚ್ಯಂಕ ಏರಿಕೆ ಕಂಡು ಬಂದಿದ್ದು,429 ಅಂಕಗಳ ಏರಿಕೆಯೊಂದಿಗೆ ದಿನದ ಅಂತ್ಯಕ್ಕೆ 35,843ಯಲ್ಲಿ ವಹಿವಾಟು ಮುಗಿಸಿದೆ. ಇದರ ಜತೆಗೆ ನಿಫ್ಟಿ ಕೂಡ 121.65 ಅಂಕಗಳ ಚೇತರಿಕೆ ಕಾಣಿಸಿದೆ. ಇನ್ನು ಕಳೆದೆರೆಡು ದಿನಗಳಿಂದ ಏರಿಕೆ ಕಾಣದ ತೈಲ ಬೆಲೆಯಲ್ಲಿಂದು ಮತ್ತಷ್ಟು ಏರಿಕೆ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.