ಮಾರುಕಟ್ಟೆ ರೌಂಡಪ್: ವಾರಾಂತ್ಯದ ವಹಿವಾಟಿನಲ್ಲಿ 353 ಅಂಕ ಜಿಗಿದ ಸೆನ್ಸೆಕ್ಸ್
ಮುಂಬೈ: ಭಾರತೀಯ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಶುಕ್ರವಾರ ನಡೆದ ವಹಿವಾಟಿನಂದು ಏರಿಕೆ ದಾಖಲಿಸಿದ್ದು, ಸತತ 6 ಸೇಷನ್ಗಳಲ್ಲಿ ಗಳಿಕೆ ಕಂಡಿದೆ. ಶುಕ್ರವಾರದ ವಹಿವಾಟಿನಂದು ಬ್ಯಾಂಕ್ ಮತ್ತು ಹಣಕಾಸು ವಲಯದ ಷೇರುಗಳು ದಿನದ ಲಾಭ ಬಾಚಿಕೊಂಡವು. ತತ್ಪರಿಣಾಮ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 353.84 ಅಂಕ ಏರಿಕೆ ಕಂಡು 39,467.31 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 96 ಅಂಕ ಮುನ್ನಡೆ ಸಾಧಿಸಿ 11,655.25 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.