ಔಷಧಿ, ಹಣಕಾಸು ವಲಯದ ಷೇರುಗಳ ಗಳಿಕೆ: ದೇಶಿ ಪೇಟೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ
ಹೈದರಾಬಾದ್: ಭಾರತೀಯ ಷೇರುಪೇಟೆಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರದ ವಹಿವಾಟಿನಂದು ಹಣಕಾಸು ಮತ್ತು ಫಾರ್ಮಾ ವಲಯದ ಷೇರುಗಳ ಲಾಭದಿಂದ ಏರಿಕೆಯೊಂದಿಗೆ ಕೊನೆಗೊಂಡವು. ಸೆನ್ಸೆಕ್ಸ್ 179 ಅಂಕ ಏರಿಕೆ ಆಗಿದ್ದರೆ, ನಿಫ್ಟಿ 67 ಅಂಶ ಏರಿಕೆ ಕಂಡು 10,311.20ಕ್ಕೆ ತಲುಪಿದೆ. ದೇಶದ ಪ್ರಮುಖ ನಗರಗಳಲ್ಲಿ ಸತತ ಹದಿನಾರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನ 48,190 ರೂ.ಗೆ ಮಾರಾಟವಾಯಿತು. ಡಾಲರ್ ವಿರುದ್ಧ ರೂಪಾಯಿ 17 ಪೈಸೆಯಷ್ಟು ಏರಿಕೆ ಕಂಡು ₹ 76.06ರಲ್ಲಿ ವಹಿವಾಟು ನಿರತವಾಯಿತು.