ಬೇಸಿಗೆಯ ಬಿಸಿ, ಬರಿದಾಯ್ತು ಹೇಮಾವತಿಯ ಒಡಲು! ಹೆಚ್ಚಿದ ಆತಂಕ - ಒಡಲು
ಹಾಸನ: ಕಾವೇರಿ ಉಪನದಿಗಳಲ್ಲಿ ಒಂದಾದ ಹೇಮಾವತಿಯ ಒಡಲು ಬರಿದಾಗುತ್ತಾ ಹೋಗುತ್ತಿದೆ. ಪಶ್ಚಿಮಘಟ್ಟ ಶ್ರೇಣಿಯ ಜಾವಳಿಯಲ್ಲಿ ಹುಟ್ಟುವ ಈ ನದಿ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹರಿದು ಕೆಆರ್ಎಸ್ ಹಿನ್ನೀರಿನ ಕಾವೇರಿ ನದಿ ಸೇರಿಕೊಳ್ಳುತ್ತೆ. ಸುಮಾರು 245 ಕಿ.ಮೀ. ಹರಿಯುವ ಹೇಮಾವತಿಗೆ ಗೊರೂರು ಗ್ರಾಮದಲ್ಲಿ ಅಣೆಕಟ್ಟೆಯೊಂದನ್ನು ಕಟ್ಟಲಾಗಿದೆ. ಆದ್ರೀಗ ಸುಡು ಬೇಸಿಗೆಯ ಕಾರಣ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಇದು ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ.