ತೆಗಂಪೂರ್ ಕೆರೆ ಖಾಲಿ ಖಾಲಿ,ಕಷ್ಟ ಕಾಲದಲ್ಲಿ ಕೈಹಿಡಿಯುತ್ತಿದ್ದ ಕೆರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬರಿದು!
ಒಂದು ಲಕ್ಷ ಜನವಸತಿ ಇರುವ ಪ್ರದೇಶದಲ್ಲಿ ಸಂಜೀವಿನಿಯಂತೆ ನೀರುಣಿಸುತ್ತಿದ್ದ ತೆಗಂಪೂರ್ ಕೆರೆ ಇದೇ ಮೊದಲ ಬಾರಿಗೆ ಖಾಲಿಯಾಗಿದೆ. ಪರಿಣಾಮ, ಜನರು ಹನಿ ಹನಿ ನೀರಿಗೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.ಕಷ್ಟ ಕಾಲದಲ್ಲಿ ಕೈಹಿಡಿಯುತ್ತಿದ್ದ ತೆಗಂಪೂರ ಕೆರೆ ನಿರ್ಲಕ್ಷ್ಯದಿಂದ ಬರಿದಾಗಿದ್ದು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ.