ಕೊಪ್ಪಳ: ಮನೆಯಿಂದ ಹೊರಗೆ ಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು
ಕೊಪ್ಪಳ: ಕೊರೊನಾ ಕಂಟ್ರೋಲ್ ಮಾಡಲು ಇಡೀ ಭಾರತ ಲಾಕ್ ಡೌನ್ ಆಗಿದೆ. ಅದರಂತೆ ಕೊಪ್ಪಳವೂ ಲಾಕ್ ಡೌನ್ ಆಗಿದ್ದು ಕೆಲವರು ಅನವಶ್ಯಕವಾಗಿ ಮನೆಯಿಂದ ಹೊರಬಂದು ಓಡಾಡ್ತಿದ್ದಾರೆ. ಹೀಗೆ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸ್ತಿದ್ದಾರೆ. ಅದರಲ್ಲೂ ಕೊಪ್ಪಳದಲ್ಲಿ ತುಂಗಾಪಡೆಯು ಬಿಸಿಬಿಸಿ ಕಜ್ಜಾಯ ಕೊಡ್ತಿದೆ. ಭಾಗ್ಯನಗರ ಹಾಗೂ ಕೊಪ್ಪಳ ನಗರದಲ್ಲಿ ಸಂಚರಿಸುತ್ತಿರುವ ಈ ತುಂಗಾಪಡೆ ಅನವಶ್ಯಕವಾಗಿ ಮನೆಯಿಂದ ಹೊರಬಂದು ಓಡಾಡ್ತಿದ್ದವರಿಗೆ ಬಿಸಿಬಿಸಿ ಕಜ್ಜಾಯ ನೀಡುವುದರ ಜೊತೆಗೆ ಬಸ್ಕಿ ಹೊಡೆಸಿ ಮನೆಯಲ್ಲಿರುವಂತೆ ವಾರ್ನ್ ಮಾಡಿ ಕಳಿಸಿದೆ. ತುಂಗಾಪಡೆ ನೀಡುವ ಬಿಸಿ ಬಿಸಿ ಕಜ್ಜಾಯದ ಸ್ಯಾಂಪಲ್ಸ್ ಈ ವಿಡಿಯೋದಲ್ಲಿದೆ ನೀವೂ ಒಮ್ಮೆ ನೋಡಿ.